Acts 25:6 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಫೆಸ್ತನು ಇನ್ನೂ ಎಂಟು-ಹತ್ತು ದಿನಗಳವರೆಗೆ ಜೆರುಸಲೇಮಿನಲ್ಲಿ ಇದ್ದನು. ಬಳಿಕ ಅವನು ಸೆಜರೇಯಕ್ಕೆ ಹಿಂತಿರುಗಿದನು. ಮರುದಿನ ಅವನು ಸೈನಿಕರಿಗೆ ಪೌಲನನ್ನು ತನ್ನ ಮುಂದೆ ಕರೆದುಕೊಂಡು ಬರಬೇಕೆಂದು ತಿಳಿಸಿದನು. ಫೆಸ್ತನು ನ್ಯಾಯಾಸ್ಥಾನದ ಮೇಲೆ ಕುಳಿತುಕೊಂಡಿದ್ದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವನು ಯೆರುಸಲೇಮಿನಲ್ಲಿ ಎಂಟು ಹತ್ತಕ್ಕಿಂತ ಹೆಚ್ಚು ದಿನಗಳು ನಿಲ್ಲದೆ ಕೈಸರೈಯಕ್ಕೆ ಹೋಗಿ ಮರುದಿನ ನ್ಯಾಯಸ್ಥಾನದಲ್ಲಿ ಕುಳಿತುಕೊಂಡು, ಪೌಲನನ್ನು ಕರತರಬೇಕೆಂದು ಅಪ್ಪಣೆಮಾಡಿದನು.
Kannada BSI Bible 2016
ಅವನು ಅವರ ಮಧ್ಯದಲ್ಲಿ ಹತ್ತು ದಿವಸಗಳಿಗಿಂತ ಹೆಚ್ಚು ಸಮಯವಿದ್ದ ತರುವಾಯ ಕೈಸರೈಯಕ್ಕೆ ಹೊರಟುಹೋಗಿ ಮರುದಿನ ನ್ಯಾಯಾಸನದ ಮೇಲೆ ಕೂತುಕೊಂಡು ಪೌಲನನ್ನು ಕರೆದುಕೊಂಡು ಬರ ಬೇಕೆಂದು ಅಪ್ಪಣೆಕೊಟ್ಟನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನು ಅವರಲ್ಲಿ ಎಂಟು ಹತ್ತಕ್ಕಿಂತ ಹೆಚ್ಚು ದಿವಸಗಳು ನಿಲ್ಲದೆ ಕೈಸರೈಯಕ್ಕೆ ಹೋಗಿ ಮರುದಿನ ನ್ಯಾಯಸ್ಥಾನದಲ್ಲಿ ಕೂತುಕೊಂಡು ಪೌಲನನ್ನು ತರಬೇಕೆಂದು ಅಪ್ಪಣೆಮಾಡಿದನು.
Kannada Bible (KNCL) BSI 2016
ಫೆಸ್ತನು ಅವರೊಂದಿಗೆ ಎಂಟು-ಹತ್ತು ದಿನಗಳನ್ನು ಕಳೆದು, ಸೆಜರೇಯಕ್ಕೆ ಮರಳಿ ಬಂದನು. ಮಾರನೆಯ ದಿನ ಅವನು ನ್ಯಾಯಸ್ಥಾನದಲ್ಲಿ ಕುಳಿತು ಪೌಲನನ್ನು ತನ್ನ ಮುಂದೆ ಕರೆದುತರಬೇಕೆಂದು ಆಜ್ಞಾಪಿಸಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಎಂಟು ಹತ್ತು ದಿನಗಳನ್ನು ಅವರೊಂದಿಗೆ ಕಳೆದ ತರುವಾಯ ಅವನು ಕೈಸರೈಯಕ್ಕೆ ಹೋದನು. ಮರುದಿನ ನ್ಯಾಯಸ್ಥಾನದಲ್ಲಿ ಕುಳಿತುಕೊಂಡು ತನ್ನ ಮುಂದೆ ಪೌಲನನ್ನು ಕರೆತರಬೇಕೆಂದು ಆಜ್ಞಾಪಿಸಿದನು.