Acts 26:25 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಪೌಲನು, “ಮಹಾರಾಜಶ್ರೀಗಳಾದ ಫೆಸ್ತನೇ, ನಾನು ಹುಚ್ಚನಲ್ಲ. ನಾನು ಹೇಳುತ್ತಿರುವುದು ಸತ್ಯಸಂಗತಿಗಳಾಗಿವೆ. ನನ್ನ ಮಾತುಗಳು ಮೂರ್ಖನ ಮಾತುಗಳಲ್ಲ. ನಾನು ಸ್ವಸ್ಥಬುದ್ಧಿಯುಳ್ಳವನಾಗಿದ್ದೇನೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅದಕ್ಕೆ ಪೌಲನು; “ಮಹಾ ಶ್ರೇಷ್ಠನಾದ ಫೆಸ್ತನೇ, ನಾನು ಹುಚ್ಚನಲ್ಲ; ಸ್ವಸ್ಥಬುದ್ಧಿಯುಳ್ಳವನಾಗಿ ಸತ್ಯವಾದ ಮಾತುಗಳನ್ನೇ ಹೇಳುತ್ತಿದ್ದೇನೆ.
Kannada BSI Bible 2016
ಆದರೆ ಅವನು--ಗೌರವವುಳ್ಳ ಫೆಸ್ತನೇ, ನಾನು ಹುಚ್ಚನಲ್ಲ; ಸ್ವಸ್ಥಬುದ್ಧಿಯಿಂದ ಸತ್ಯವಾದ ಮಾತುಗಳನ್ನೇ ಹೇಳು ತ್ತೇನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಅದಕ್ಕೆ ಪೌಲನು - ಶ್ರೀಮನ್ ಮಹಾ ಫೆಸ್ತನೇ, ನಾನು ಮರುಳಾಗಿಲ್ಲ; ಸ್ವಸ್ಥಬುದ್ಧಿಯುಳ್ಳವನಾಗಿ ಸತ್ಯವಾದ ಮಾತುಗಳನ್ನಾಡುತ್ತೇನೆ.
Kannada Bible (KNCL) BSI 2016
ಅದಕ್ಕೆ ಪೌಲನು, “ನಾನು ಹುಚ್ಚನಲ್ಲ, ಫೆಸ್ತ ಮಹಾಪ್ರಭೂ, ನಾನು ಆಡುತ್ತಿರುವುದು ತಿಳಿಮನಸ್ಸಿನಿಂದಾಡುವ ಸತ್ಯ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಪೌಲನು, “ಬಹು ಗೌರವವುಳ್ಳ ಫೆಸ್ತರೇ, ನಾನು ಹುಚ್ಚನಲ್ಲ, ಆದರೆ ನಾನು ಸತ್ಯವನ್ನೇ ಸ್ವಸ್ಥಬುದ್ಧಿಯಿಂದ ಮಾತನಾಡುತ್ತಿರುವೆನು.