Acts 27:1 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಾವು ಇಟಲಿಗೆ ನೌಕಾಯಾನ ಮಾಡಬೇಕೆಂದು ತೀರ್ಮಾನವಾಯಿತು. ಪೌಲನಿಗೂ ಇತರ ಕೆಲವು ಕೈದಿಗಳಿಗೂ ಜೂಲಿಯಸ್ ಎಂಬ ಸೇನಾಧಿಕಾರಿಯು ಕಾವಲಾಗಿದ್ದನು. ಜೂಲಿಯಸನು ಚಕ್ರವರ್ತಿಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾವು ಸಮುದ್ರಮಾರ್ಗವಾಗಿ ಇತಾಲ್ಯದೇಶಕ್ಕೆ ಹೋಗಬೇಕೆಂದು ತೀರ್ಮಾನವಾದ ಮೇಲೆ, ಪೌಲನನ್ನೂ, ಬೇರೆ ಕೆಲವು ಸೆರೆಯವರನ್ನೂ ಔಗುಸ್ತ ಸೇನೆಗೆ ಸೇರಿದ ಯೂಲ್ಯನೆಂಬ ಒಬ್ಬ ಶತಾಧಿಪತಿಗೆ ಒಪ್ಪಿಸಿದರು.
Kannada BSI Bible 2016
ನಾವು ಸಮುದ್ರ ಪ್ರಯಾಣ ಮಾಡಿ ಇತಾಲ್ಯಕ್ಕೆ ಹೋಗಬೇಕೆಂದು ನಿಶ್ಚಯ ಮಾಡಿದಾಗ ಔಗುಸ್ತನ ಪಟಾಲಮಿನ ಶತಾಧಿಪತಿಯಾದ ಯೂಲ್ಯ ಎಂಬವನಿಗೆ ಪೌಲನನ್ನೂ ಬೇರೆ ಕೆಲವು ಕೈದಿಗಳನ್ನೂ ಅವರು ಒಪ್ಪಿಸಿದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಾವು ಸಮುದ್ರಮಾರ್ಗವಾಗಿ ಇತಾಲ್ಯದೇಶಕ್ಕೆ ಹೋಗಬೇಕೆಂದು ತೀರ್ಮಾನವಾದ ಮೇಲೆ ಪೌಲನನ್ನೂ ಬೇರೆ ಕೆಲವು ಸೆರೆಯವರನ್ನೂ ಚಕ್ರವರ್ತಿಯ ಪಟಾಲವಿುಗೆ ಸೇರಿದ ಯೂಲ್ಯನೆಂಬ ಒಬ್ಬ ಶತಾಧಿಪತಿಗೆ ಒಪ್ಪಿಸಿದರು.
Kannada Bible (KNCL) BSI 2016
ನಾವು ಇಟಲಿಗೆ ನೌಕಾಯಾನ ಮಾಡಬೇಕೆಂದು ತೀರ್ಮಾನವಾದಮೇಲೆ ಪೌಲನನ್ನೂ ಬೇರೆ ಕೆಲವು ಕೈದಿಗಳನ್ನೂ ‘ಔಗುಸ್ತದಳ’ ಎಂಬ ರೋಮಿನ ದಳಕ್ಕೆ ಸೇರಿದ ಜೂಲಿಯಸ್ ಎಂಬ ಶತಾಧಿಪತಿಯ ವಶಕ್ಕೆ ಒಪ್ಪಿಸಲಾಯಿತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಾವು ಇಟಲಿಗೆ ಸಮುದ್ರ ಪ್ರಯಾಣ ಮಾಡಬೇಕೆಂದು ತೀರ್ಮಾನವಾದ ಮೇಲೆ ಪೌಲನನ್ನೂ ಇತರ ಕೈದಿಗಳನ್ನೂ ಯೂಲ್ಯನೆಂಬ ಹೆಸರಿನ ಒಬ್ಬ ಶತಾಧಿಪತಿಗೆ ಒಪ್ಪಿಸಿದರು. ಅವನು ಚಕ್ರವರ್ತಿಯ ದಳಕ್ಕೆ ಸೇರಿದವನು.