Acts 27:33 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಇನ್ನೂ ಬೆಳಕಾಗುತ್ತಿರುವಾಗಲೇ ಏನಾದರೂ ತಿನ್ನುವಂತೆ ಪೌಲನು ಅವರನ್ನು ಒತ್ತಾಯಿಸುತ್ತಾ, “ಕಳೆದ ಹದಿನಾಲ್ಕು ದಿನಗಳಿಂದ ನೀವು ಊಟವನ್ನೇ ಮಾಡಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಬೆಳಗಾಗುತ್ತಿರುವಷ್ಟರಲ್ಲಿ ಪೌಲನು ಏನಾದರೂ ಆಹಾರವನ್ನು ತೆಗೆದುಕೊಳ್ಳಬೇಕೆಂದು ಎಲ್ಲರನ್ನು ಬೇಡಿಕೊಳ್ಳುತ್ತಾ; “ಇಂದಿಗೆ ನೀವು ಹದಿನಾಲ್ಕು ದಿನದಿಂದ ಕಾದುಕೊಂಡು ಆಹಾರವನ್ನು ತೆಗೆದುಕೊಳ್ಳದೆ, ಹಸಿದುಕೊಂಡು ಇದ್ದೀರಿ.
Kannada BSI Bible 2016
ಬೆಳಗಾಗುತ್ತಿರುವಷ್ಟರಲ್ಲಿ ಆಹಾರವನ್ನು ತೆಗೆದುಕೊಳ್ಳಬೇಕೆಂದು ಪೌಲನು ಅವರೆಲ್ಲರನ್ನು ಬೇಡಿ ಕೊಳ್ಳುವವನಾಗಿ--ಏನೂ ಆಹಾರವನ್ನು ತೆಗೆದು ಕೊಳ್ಳದೆ ಕಾದುಕೊಂಡು ಉಪವಾಸವಾಗಿರುವದು ಇದು ಹದಿನಾಲ್ಕನೆಯ ದಿವಸ.
Kannada BSI JV (ಕನ್ನಡ ಸತ್ಯವೇದವು J.V. (BSI))
ಬೆಳಗಾಗುತ್ತಿರುವಷ್ಟರಲ್ಲಿ ಪೌಲನು ಏನಾದರೂ ಆಹಾರವನ್ನು ತೆಗೆದುಕೊಳ್ಳಬೇಕೆಂದು ಎಲ್ಲರನ್ನು ಬೇಡಿಕೊಳ್ಳುವವನಾಗಿ - ನೀವು ಈಹೊತ್ತಿಗೆ ಹದಿನಾಲ್ಕು ದಿವಸದಿಂದ ಕಾದುಕೊಂಡು ಆಹಾರವೇನೂ ತೆಗೆದುಕೊಳ್ಳದೆ ಉಪವಾಸವಾಗಿಯೇ ಇದ್ದೀರಾದದರಿಂದ
Kannada Bible (KNCL) BSI 2016
“ಬೆಳಗಾಗುತ್ತಿದ್ದಂತೆ ಪೌಲನು ಅವರೆಲ್ಲರನ್ನು ಕುರಿತು ಇಂತೆಂದನು: “ನೀವೆಲ್ಲರು ಚಿಂತೆಯಿಂದ ಹದಿನಾಲ್ಕು ದಿನಗಳವರೆಗೆ ಏನನ್ನೂ ತಿನ್ನದೆ ಇದ್ದೀರಿ;
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಬೆಳಗಾಗುತ್ತಿದ್ದಂತೆ ಪೌಲನು ಅವರೆಲ್ಲರೂ ಏನನ್ನಾದರೂ ತಿನ್ನಬೇಕೆಂದು ಒತ್ತಾಯ ಮಾಡಿ, “ಕಳೆದ ಹದಿನಾಲ್ಕು ದಿನಗಳಿಂದ ನೀವು ಕಾದುಕೊಂಡವರಾಗಿ ಊಟವನ್ನೇ ಮಾಡಿಲ್ಲ.