Acts 27:39 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಬೆಳಗಾದಾಗ ನಾವಿಕರು ಭೂಮಿಯನ್ನು ಕಂಡರು. ಆದರೆ ಅದು ಯಾವ ಭೂಮಿಯೆಂದು ಗೊತ್ತಿರಲಿಲ್ಲ. ಅವರು ಕಂಡದ್ದು ಉಸುಬಿನ ದಡವುಳ್ಳ ಒಂದು ಕೊಲ್ಲಿ. ಸಾಧ್ಯವಾದರೆ ಹಡಗನ್ನು ಆ ಕೊಲ್ಲಿಗೆ ನಡೆಸಬೇಕೆಂದು ನಾವಿಕರು ಬಯಸಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಬೆಳಗಾದ ಮೇಲೆ ಆ ದೇಶದ ಗುರುತನ್ನು ತಿಳಿಯದೆ ಉಸುಬಿನ ದಡವುಳ್ಳ ಒಂದು ಕೊಲ್ಲಿಯನ್ನು ನೋಡಿ ಆ ದಡದ ಮೇಲೆ ಹಡಗನ್ನು ನೂಕುವುದಕ್ಕೆ ಸಾಧ್ಯವಾದೀತೆಂದು ಯೋಚಿಸಿದರು.
Kannada BSI Bible 2016
ಬೆಳಗಾದ ಮೇಲೆ ಆ ದೇಶವು ಯಾವ ದೆಂದು ತಿಳಿಯದೆ ದಡವಿದ್ದ ಒಂದು ಕೊಲ್ಲಿಯನ್ನು ನೋಡಿ ಅದರ ಮೇಲೆ ಹಡಗನ್ನು ನೂಕುವದಕ್ಕೆ ಸಾಧ್ಯವಾದೀತೆಂದು ನಾವು ಯೋಚಿಸಿದೆವು.
Kannada BSI JV (ಕನ್ನಡ ಸತ್ಯವೇದವು J.V. (BSI))
ಬೆಳಗಾದ ಮೇಲೆ ಆ ದೇಶದ ಗುರುತನ್ನು ತಿಳಿಯದೆ ಉಸುಬಿನ ದಡವುಳ್ಳ ಒಂದು ಕೊಲ್ಲಿಯನ್ನು ನೋಡಿ ಆ ದಡದ ಮೇಲೆ ಹಡಗನ್ನು ನೂಕುವದಕ್ಕೆ ಸಾಧ್ಯವಾದೀತೆಂದು ಯೋಚಿಸಿ
Kannada Bible (KNCL) BSI 2016
ಬೆಳಗಾದ ಮೇಲೆ, ದಡವಿರುವ ಕೊಲ್ಲಿಯೊಂದು ನಾವಿಕರಿಗೆ ಕಾಣಿಸಿತು. ಅದು ಯಾವ ತೀರವೆಂದು ಗುರುತು ಹಚ್ಚಲು ಅವರಿಂದಾಗಲಿಲ್ಲ. ಆದರೂ ಹಡಗನ್ನು ಸಾಧ್ಯವಾದರೆ ಆ ದಡಕ್ಕೆ ಮುಟ್ಟಿಸಬೇಕೆಂದು ಯೋಚಿಸಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಬೆಳಗಾದ ಮೇಲೆ ನೆಲವನ್ನು ಗುರುತಿಸಲು ಅವರಿಗೆ ಸಾಧ್ಯವಾಗಲಿಲ್ಲ. ಆದರೆ ಅವರು ದಡವನ್ನು ಕಂಡು ಸಾಧ್ಯವಾದರೆ ಅಲ್ಲಿ ನೌಕೆಯನ್ನು ನಿಲ್ಲಿಸಬೇಕೆಂದು ತೀರ್ಮಾನಿಸಿದರು.