Acts 28:14 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅಲ್ಲಿ ಕೆಲವು ಮಂದಿ ವಿಶ್ವಾಸಿಗಳನ್ನು ಕಂಡೆವು. ತಮ್ಮೊಂದಿಗೆ ಒಂದು ವಾರವಾದರೂ ಇರಬೇಕೆಂದು ಅವರು ನಮ್ಮನ್ನು ಕೇಳಿಕೊಂಡರು. ಕೊನೆಗೆ ನಾವು ರೋಮಿಗೆ ಹೊರಟೆವು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅಲ್ಲಿ ಕ್ರೈಸ್ತ ಸಹೋದರರನ್ನು ಕಂಡೆವು. ಅವರು ನಮ್ಮನ್ನು ತಮ್ಮ ಬಳಿಯಲ್ಲಿ ಏಳು ದಿನ ಇರಬೇಕೆಂದು ಬೇಡಿಕೊಂಡರು. ತರುವಾಯ ರೋಮಾಪುರಕ್ಕೆ ಬಂದೆವು.
Kannada BSI Bible 2016
ಅಲ್ಲಿ ನಾವು ಸಹೋದರರನ್ನು ನೋಡಿದಾಗ ಅವರು ನಮ್ಮನ್ನು ಏಳು ದಿವಸ ತಮ್ಮೊಂದಿಗೆ ಇರಬೇಕೆಂದು ಬೇಡಿಕೊಂಡರು; ಹೀಗೆ ನಾವು ರೋಮ್‌ ಕಡೆಗೆ ಹೊರಟೆವು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅಲ್ಲಿ ಕ್ರೈಸ್ತ ಸಹೋದರರು ಸಿಕ್ಕಿದರು. ಅವರು ನಮ್ಮನ್ನು ತಮ್ಮ ಬಳಿಯಲ್ಲಿ ಏಳು ದಿವಸ ಇರಬೇಕೆಂದು ಬೇಡಿಕೊಂಡರು. ತರುವಾಯ ರೋಮಾಪುರಕ್ಕೆ ಬಂದೆವು.
Kannada Bible (KNCL) BSI 2016
ಅಲ್ಲಿ ಕೆಲವು ಕ್ರೈಸ್ತಭಕ್ತಾದಿಗಳನ್ನು ಕಂಡೆವು. ತಮ್ಮೊಡನೆ ಒಂದು ವಾರ ತಂಗಬೇಕೆಂದು ಅವರು ನಮ್ಮನ್ನು ಕೇಳಿಕೊಂಡರು. ತರುವಾಯ ನಾವು ರೋಮಿಗೆ ಬಂದೆವು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅಲ್ಲಿ ಕೆಲವು ಸಹೋದರರು ನಮ್ಮನ್ನು ಕಂಡು ಒಂದು ವಾರ ತಮ್ಮೊಂದಿಗೆ ಕಳೆಯಬೇಕೆಂದು ಆಮಂತ್ರಿಸಿದರು. ಕೊನೆಗೆ ನಾವು ರೋಮ್ ಸೇರಿದೆವು.