Acts 28:19 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆದರೆ ಅಲ್ಲಿದ್ದ ಯೆಹೂದ್ಯರು ಅದಕ್ಕೆ ಆಕ್ಷೇಪಿಸಿದರು. ಆದ್ದರಿಂದ ನನಗೆ ರೋಮಿನಲ್ಲಿ ಸೀಸರನ ಮುಂದೆ ವಿಚಾರಣೆಯಾಗಲಿ ಎಂದು ಕೇಳಿಕೊಳ್ಳಬೇಕಾಯಿತು. ಆದರೆ ನನ್ನ ಜನರು ಮಾಡಿದ್ದು ತಪ್ಪೆಂದು ನಾನು ನಿಮಗೆ ಹೇಳುತ್ತಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅದಕ್ಕೆ ಯೆಹೂದ್ಯರು ವಿರೋಧಿಸಿದ್ದರಿಂದ, ನಾನು ಕೈಸರನ ಎದುರಿನಲ್ಲಿ ಹೇಳಿಕೊಳ್ಳುತ್ತೇನೆಂದು ಹೇಳಬೇಕಾಗಿ ಬಂದಿತು. ನನ್ನ ಸ್ವಂತ ದೇಶದವರ ಮೇಲೆ ದೋಷಾರೋಪಣೆ ಮಾಡಬೇಕೆಂಬ ಅಭಿಪ್ರಾಯದಿಂದ ಅದನ್ನು ಹೇಳಲಿಲ್ಲ.
Kannada BSI Bible 2016
ಆದರೆ ಯೆಹೂದ್ಯರು ಅದಕ್ಕೆ ವಿರೋಧವಾಗಿ ಮಾತನಾಡಿದಾಗ ಕೈಸರನಿಗೆ ಹೇಳಿಕೊಳ್ಳುವಂತೆ ನಾನು ಒತ್ತಾಯ ಮಾಡಲ್ಪಟ್ಟೆನು; ಆದರೆ ನನ್ನ ಸ್ವದೇಶದವರ ಮೇಲೆ ತಪ್ಪು ಹೊರಿಸುವದಕ್ಕಾಗಿ ಅಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ಅದಕ್ಕೆ ಯೆಹೂದ್ಯರು ಅಡ್ಡಮಾತಾಡಿದ್ದರಿಂದ ನಾನು ಚಕ್ರವರ್ತಿಯ ಎದುರಿನಲ್ಲಿ ಹೇಳಿಕೊಳ್ಳುತ್ತೇನೆಂದು ಹೇಳಬೇಕಾಗಿ ಬಂತು. ನನ್ನ ಸ್ವದೇಶದವರ ಮೇಲೆ ದೋಷಾರೋಪಣೆ ಮಾಡಬೇಕೆಂಬ ಅಭಿಪ್ರಾಯದಿಂದ ಅದನ್ನು ಹೇಳಲಿಲ್ಲ.
Kannada Bible (KNCL) BSI 2016
ಆದರೆ ಯೆಹೂದ್ಯರು ಇದನ್ನು ಪ್ರತಿಭಟಿಸಿದರು. ಆಗ ನಾನು ಚಕ್ರವರ್ತಿಗೇ ಅಪೀಲುಮಾಡಬೇಕಾಯಿತು. ನನ್ನ ಸ್ವದೇಶೀಯರ ಮೇಲೆ ದೋಷಾರೋಪಣೆ ಮಾಡಬೇಕೆಂದು ನಾನು ಹಾಗೆ ಮಾಡಲಿಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಯೆಹೂದ್ಯರು ಅದನ್ನು ವಿರೋಧಿಸಿದಾಗ, ನಾನು ನೇರವಾಗಿ ಕೈಸರನಿಗೆ ಮನವಿ ಮಾಡಿಕೊಳ್ಳಲೇಬೇಕಾಯಿತು. ನನಗೆ ಸ್ವದೇಶದವರ ವಿರೋಧವಾಗಿ ಹೊರಿಸಲು ಯಾವ ಆಪಾದನೆಯೂ ಇಲ್ಲ.