Acts 28:2 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆಗ ಮಳೆಯು ಸುರಿಯುತ್ತಿತ್ತು ಮತ್ತು ತುಂಬ ಚಳಿಯಿತ್ತು. ಆದರೆ ಅಲ್ಲಿನ ಜನರು ನಮಗೆ ವಿಶೇಷವಾದ ಕರುಣೆತೋರಿ ನಮಗಾಗಿ ಬೆಂಕಿಹೊತ್ತಿಸಿ ನಮ್ಮೆಲ್ಲರನ್ನು ಆಹ್ವಾನಿಸಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅನ್ಯಭಾಷೆಯವರಾದ ಆ ದ್ವೀಪದವರು ನಮಗೆ ವಿಶೇಷ ಸಹಾನುಭೂತಿಯನ್ನು ತೋರಿದರು. ಮಳೆಯು ಆಗಲೇ ಹೊಯ್ದು ಚಳಿಯಾಗುತ್ತಿದ್ದುದರಿಂದ, ಅವರು ಬೆಂಕಿಯನ್ನು ಹೊತ್ತಿಸಿ ನಮ್ಮೆಲ್ಲರನ್ನು ಸೇರಿಸಿಕೊಂಡರು.
Kannada BSI Bible 2016
ಅಲ್ಲಿಯ ಅನಾಗರಿಕ ಜನರು ನಮಗೆ ತೋರಿಸಿದ ದಯೆಯು ಅಪಾರವಾಗಿತ್ತು; ಆ ಸಮಯ ದಲ್ಲಿ ಮಳೆಯೂ ಚಳಿಯೂ ಇದ್ದದರಿಂದ ಅವರು ಬೆಂಕಿಯನ್ನು ಹೊತ್ತಿಸಿ ನಮ್ಮೆಲ್ಲರನ್ನು ಸೇರಿಸಿಕೊಂಡರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅನ್ಯಭಾಷೆಯವರಾದ ಆ ದ್ವೀಪದವರು ನಮಗೆ ಮಾಡಿದ ಉಪಕಾರವು ಅಷ್ಟಿಷ್ಟಲ್ಲ. ಮಳೆಯು ಆಗಲೇ ಹೊಯ್ಯುತ್ತಿದ್ದರಿಂದಲೂ ಚಳಿಯಾಗಿರುವದರಿಂದಲೂ ಅವರು ಬೆಂಕಿಯನ್ನು ಹೊತ್ತಿಸಿ ನಮ್ಮೆಲ್ಲರನ್ನು ಸೇರಿಸಿಕೊಂಡರು.
Kannada Bible (KNCL) BSI 2016
ಅಲ್ಲಿಯ ನಿವಾಸಿಗಳು ನಮಗೆ ವಿಶೇಷ ಸಹಾನುಭೂತಿಯನ್ನು ತೋರಿದರು. ಮಳೆ ಹೊಯ್ದು ಚಳಿಯಾಗುತ್ತಿದ್ದುದರಿಂದ ಅವರು ಬೆಂಕಿಮಾಡಿ ನಮ್ಮೆಲ್ಲರನ್ನು ಬರಮಾಡಿಕೊಂಡರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆ ದ್ವೀಪದ ನಿವಾಸಿಗಳು ನಮಗೆ ಅಸಾಧಾರಣವಾದ ದಯೆತೋರಿಸಿದರು. ಆಗ ಮಳೆ ಬರುತ್ತಿದ್ದು ಬಹಳ ಚಳಿಯಿದ್ದುದರಿಂದ ಅವರು ಬೆಂಕಿಹೊತ್ತಿಸಿ ನಮ್ಮನ್ನು ಬರಮಾಡಿಕೊಂಡರು.