Acts 28:3 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಪೌಲನು ಒಂದು ಹೊರೆ ಕಟ್ಟಿಗೆಯನ್ನು ಕೂಡಿಸಿ ಅದನ್ನು ಬೆಂಕಿಯ ಮೇಲೆ ಹಾಕುತ್ತಿರಲು ಅದರ ಕಾವಿನ ದೆಸೆಯಿಂದ ವಿಷದ ಹಾವೊಂದು ಹೊರಗೆ ಬಂದು ಪೌಲನ ಕೈಗೆ ಸುತ್ತಿಕೊಂಡಿತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಪೌಲನು ಒಂದು ಹೊರೆ ಕಟ್ಟಿಗೆಯನ್ನು ಕೂಡಿಸಿ, ತಂದು ಬೆಂಕಿಯ ಮೇಲೆ ಹಾಕಲು, ಆ ಶಾಖಕ್ಕೆ ಒಂದು ಸರ್ಪವು ಹೊರಗೆ ಬಂದು, ಅವನ ಕೈಯನ್ನು ಬಿಗಿಯಾಗಿ ಹಿಡಿದುಕೊಂಡಿತು.
Kannada BSI Bible 2016
ಪೌಲನು ಕಟ್ಟಿಗೆಯ ಹೊರೆಯನ್ನು ಕೂಡಿಸಿ ಬೆಂಕಿಯ ಮೇಲೆ ಹಾಕಿದಾಗ ಆ ಕಾವಿನ ದೆಸೆಯಿಂದ ಒಂದು ವಿಷ ಸರ್ಪವು ಹೊರಗೆ ಬಂದು ಅವನ ಕೈಯನ್ನು ಬಿಗಿಯಾಗಿ ಸುತ್ತಿಕೊಂಡಿತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಪೌಲನು ಒಂದು ಹೊರೆ ಕಟ್ಟಿಗೆಯನ್ನು ಕೂಡಿಸಿ ಬೆಂಕಿಯ ಮೇಲೆ ಹಾಕಲು ಆ ಕಾವಿನ ದೆಸೆಯಿಂದ ಒಂದು ಹಾವು ಹೊರಗೆ ಬಂದು ಅವನ ಕೈಯನ್ನು ಬಿಗಿಯಾಗಿ ಹಿಡುಕೊಂಡಿತು.
Kannada Bible (KNCL) BSI 2016
ಪೌಲನು ಒಂದು ಹೊರೆ ಕಟ್ಟಿಗೆಯನ್ನು ಕೂಡಿಸಿ ತಂದು ಬೆಂಕಿಯ ಮೇಲೆ ಹಾಕುತ್ತಿದ್ದಾಗ ಬೆಂಕಿಯ ಶಾಖಕ್ಕೆ ವಿಷಸರ್ಪವೊಂದು ಹೊರಬಂದು ಅವನ ಕೈಗೆ ಸುತ್ತಿಕೊಂಡಿತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಪೌಲನು ಕಟ್ಟಿಗೆ ಕೂಡಿಸಿ ಹೊರೆಯನ್ನು ತಂದು ಬೆಂಕಿಯಲ್ಲಿ ಹಾಕಲು ಶಾಖದಿಂದ ಒಂದು ಸರ್ಪವು ಹೊರಬಂದು ಅವನ ಕೈಗೆ ಸುತ್ತಿಕೊಂಡಿತು.