Acts 4:25 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಮ್ಮ ಪಿತೃವಾದ ದಾವೀದನು ನಿನ್ನ ಸೇವಕನಾಗಿದ್ದನು. ಅವನು ಪವಿತ್ರಾತ್ಮನ ಸಹಾಯದಿಂದ ಈ ಮಾತುಗಳನ್ನು ಬರೆದನು:
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀನು ಪವಿತ್ರಾತ್ಮನ ಮೂಲಕವಾಗಿ ನಿನ್ನ ಸೇವಕನಾಗಿದ್ದ ನಮ್ಮ ಪಿತೃವಾದ ದಾವೀದನ ಬಾಯಿಂದ, “‘ಅನ್ಯಜನಗಳು ಏಕೆ ಆಕ್ರೋಶಗೊಂಡರು? ಜನಾಂಗಗಳವರು ಏಕೆ ವ್ಯರ್ಥಕಾರ್ಯಗಳನ್ನು ಯೋಚಿಸುವರು?
Kannada BSI Bible 2016
ನಿನ್ನ ಸೇವಕ ನಾದ ದಾವೀದನ ಬಾಯಿಂದ--ಅನ್ಯಜನರು ಯಾಕೆ ರೇಗಿದರು? ಮತ್ತು ಜನರು ವ್ಯರ್ಥವಾದವುಗಳನ್ನು ಯಾಕೆ ಊಹಿಸಿದರು?
Kannada BSI JV (ಕನ್ನಡ ಸತ್ಯವೇದವು J.V. (BSI))
ನೀನು ಪವಿತ್ರಾತ್ಮ ಮೂಲಕವಾಗಿ ನಿನ್ನ ಸೇವಕನಾಗಿದ್ದ ನಮ್ಮ ಪಿತೃವಾದ ದಾವೀದನ ಬಾಯಿಂದ - ಅನ್ಯಜನಗಳು ಯಾಕೆ ರೇಗಿದರು? ಜನಾಂಗಗಳವರು ವ್ಯರ್ಥಕಾರ್ಯಗಳನ್ನು ಯಾಕೆ ಯೋಚಿಸಿದರು?
Kannada Bible (KNCL) BSI 2016
ಸರ್ವೇಶ್ವರನಿಗೂ ಆತ ಅಭಿಷೇಕಿಸಿದವನಿಗೂ ವಿರುದ್ಧ ‘ಅನ್ಯಧರ್ಮಿಯರೇಕೆ ರೋಷಭರಿತರಾದರು? ಜನರೇಕೆ ವ್ಯರ್ಥ ಒಳಸಂಚು ಹೂಡಿದರು? ಲೋಕಾಧಿಪತಿಗಳೇಕೆ ಸನ್ನದ್ಧರಾದರು? ಜನನಾಯಕರೇಕೆ ಸಮಾಲೋಚಿಸಿದರು?’ ಎಂದು ನಮ್ಮ ಪಿತಾಮಹ ಹಾಗೂ ನಿಮ್ಮ ದಾಸನಾದ ದಾವೀದನ ಬಾಯಿಂದ ನುಡಿಸಿದಿರಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಪವಿತ್ರಾತ್ಮ ದೇವರ ಮೂಲಕ ನಿಮ್ಮ ಸೇವಕನೂ ನಮ್ಮ ಪಿತೃವೂ ಆದ ದಾವೀದನ ಮುಖಾಂತರ ನೀವು ಮಾತನಾಡಿ: “ ‘ರಾಷ್ಟ್ರಗಳು ರೋಷಗೊಳ್ಳುವುದೇಕೆ? ಜನರು ವ್ಯರ್ಥವಾಗಿ ಕಲ್ಪಿಸಿಕೊಂಡದ್ದೇಕೆ?