Acts 4:36 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆ ವಿಶ್ವಾಸಿಗಳಲ್ಲಿ ಯೋಸೇಫ ಎಂಬವನೂ ಇದ್ದನು. ಅಪೊಸ್ತಲರು ಅವನನ್ನು ಬಾರ್ನಬ ಎಂದು ಕರೆಯುತ್ತಿದ್ದರು. (ಬಾರ್ನಬ ಅಂದರೆ ‘ಧೈರ್ಯದಾಯಕ’) ಸೈಪ್ರಸ್‌ನಲ್ಲಿ ಹುಟ್ಟಿದ ಇವನು ಲೇವಿಯನಾಗಿದ್ದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಈ ಪ್ರಕಾರ ಮಾಡಿದವರೊಳಗೆ ಕುಪ್ರದ್ವೀಪದಲ್ಲಿ ಹುಟ್ಟಿದ ಲೇವಿಯನಾಗಿದ್ದ ಯೋಸೇಫನೆಂಬವನು ಒಬ್ಬನು. ಅವನಿಗೆ ಅಪೊಸ್ತಲರು ಬಾರ್ನಬ ಎಂದು ಹೆಸರಿಟ್ಟಿದ್ದರು, ಅಂದರೆ ಧೈರ್ಯದಾಯಕ ಎಂದರ್ಥ.
Kannada BSI Bible 2016
ಅಪೊಸ್ತಲರಿಂದ ಬಾರ್ನಬನೆಂದು ಅಡ್ಡ ಹೆಸರು ಹೊಂದಿದ ಕುಪ್ರ ದೇಶದ ಲೇವಿಯನಾದ ಯೋಸೇಫನೆಂಬವನು (ಬಾರ್ನಬ ಅಂದರೆ ಆದರ ಣೆಯ ಮಗನು)ತನಗಿದ್ದ ಭೂಮಿಯನ್ನು ಮಾರಿ ಹಣವನ್ನು ತಂದು ಅಪೊಸ್ತಲರ ಪಾದಗಳ ಬಳಿಯಲ್ಲಿ ಇಟ್ಟನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಈ ಪ್ರಕಾರ ಮಾಡಿದವರೊಳಗೆ ಕುಪ್ರದ್ವೀಪದಲ್ಲಿ ಹುಟ್ಟಿದ ಲೇವಿಯನಾಗಿದ್ದ ಯೋಸೇಫನೆಂಬವನು ಒಬ್ಬನು. ಅವನಿಗೆ ಅಪೊಸ್ತಲರು ಬಾರ್ನಬ ಅಂದರೆ ಧೈರ್ಯದಾಯಕ ಎಂದು ಹೆಸರಿಟ್ಟಿದ್ದರು.
Kannada Bible (KNCL) BSI 2016
ಜೋಸೆಫ್ ಎಂಬ ಲೇವಿಯನು ಅವರ ಸಂಗಡ ಇದ್ದನು. ಇವನ ಹುಟ್ಟೂರು ಸೈಪ್ರಸ್. ಇವನಿಗೆ ‘ಬಾರ್ನಬ’ (ಎಂದರೆ ಪ್ರೋತ್ಸಾಹಪುತ್ರ) ಎಂದು ಪ್ರೇಷಿತರು ಹೆಸರಿಟ್ಟಿದ್ದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಸೈಪ್ರಸ್ ಎಂಬಲ್ಲಿ ಹುಟ್ಟಿದ ಒಬ್ಬ ಲೇವಿಯನು ಇದ್ದನು, ಅವನ ಹೆಸರು ಯೋಸೇಫ, ಅಪೊಸ್ತಲರು ಅವನನ್ನು “ಬಾರ್ನಬ” ಎಂದು ಕರೆದರು. ಬಾರ್ನಬ ಅಂದರೆ “ಆದರಣೆಯ ಪುತ್ರನು” ಎಂದು ಅರ್ಥ.