Acts 5:8 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಪೇತ್ರನು ಆಕೆಗೆ, “ನಿಮ್ಮ ಜಮೀನಿನಿಂದ ನಿಮಗೆ ಎಷ್ಟು ಹಣ ಬಂತೆಂದು ನನಗೆ ಹೇಳು. ಇಷ್ಟೇ ಹಣವೋ?” ಎಂದು ಕೇಳಿದನು. ಸಫೈರಳು, “ಹೌದು, ಅಷ್ಟೇ!” ಎಂದು ಹೇಳಿದಳು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಪೇತ್ರನು ಆಕೆಯನ್ನು ನೋಡಿ, “ನೀವು ಆ ಹೊಲವನ್ನು ಮಾರಿದ್ದು ಇಷ್ಟೇ ಹಣಕ್ಕೋ? ನನಗೆ ಹೇಳು” ಎಂದು ಕೇಳಲು ಆಕೆಯು, “ಹೌದು, ಇಷ್ಟಕ್ಕೇ” ಅಂದಳು.
Kannada BSI Bible 2016
ಆಗ ಪೇತ್ರನು ಆಕೆಗೆ--ನೀವು ಆ ಹೊಲವನ್ನು ಇಷ್ಟೇ ಹಣಕ್ಕೆ ಮಾರಿದಿರೋ? ನನಗೆ ಹೇಳು ಎಂದು ಕೇಳಿದನು. ಅದಕ್ಕೆ ಆಕೆಯು--ಹೌದು, ಅಷ್ಟಕ್ಕೇ ಅಂದಳು.
Kannada BSI JV (ಕನ್ನಡ ಸತ್ಯವೇದವು J.V. (BSI))
ಪೇತ್ರನು ಆಕೆಯನ್ನು ನೋಡಿ - ನೀವು ಆ ಹೊಲವನ್ನು ಮಾರಿದ್ದು ಇಷ್ಟೇ ಹಣಕ್ಕೋ? ನನಗೆ ಹೇಳು ಎಂದು ಕೇಳಲು ಆಕೆಯು - ಹೌದು, ಇಷ್ಟಕ್ಕೇ ಅಂದಳು.
Kannada Bible (KNCL) BSI 2016
ಪೇತ್ರನು ಆಕೆಯನ್ನು ನೋಡಿ, “ನೀನು ಮತ್ತು ನಿನ್ನ ಪತಿ ಆಸ್ತಿಮಾರಿ ಪಡೆದ ಹಣದ ಮೊತ್ತ ಇಷ್ಟೇ ಏನು?” ಎಂದು ಕೇಳಿದನು. ಆಕೆ, “ಹೌದು, ಇಷ್ಟೇ,” ಎಂದು ಉತ್ತರಕೊಟ್ಟಳು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಪೇತ್ರನು, “ನನಗೆ ಹೇಳು ನೀನು ಮತ್ತು ನಿನ್ನ ಗಂಡ ಅನನೀಯನು ಆಸ್ತಿಯನ್ನು ಮಾರಿದ್ದರಿಂದ ಬಂದ ಹಣ ಇಷ್ಟೆಯೋ?” ಎಂದು ಆಕೆಯನ್ನು ಕೇಳಲು, “ಹೌದು, ಅಷ್ಟೇ ಕ್ರಯ ಬಂದಿತು,” ಎಂದಳು.