Acts 8:10 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಎಲ್ಲಾ ಜನರು ಅಂದರೆ ಕನಿಷ್ಠರಾದವರು ಮತ್ತು ಅತಿಮುಖ್ಯರಾದವರು ಸಿಮೋನನು ಹೇಳಿದ ಸಂಗತಿಗಳನ್ನು ನಂಬಿದ್ದರು. “ಈ ಮನುಷ್ಯನಲ್ಲಿ ‘ಮಹಾಶಕ್ತಿ’ ಎಂಬ ದೇವರ ಶಕ್ತಿಯಿದೆ!” ಎಂದು ಜನರು ಅವನ ಬಗ್ಗೆ ಹೇಳುತ್ತಿದ್ದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಚಿಕ್ಕವರು ಮೊದಲುಗೊಂಡು ದೊಡ್ಡವರವರೆಗೂ ಎಲ್ಲರೂ, “ಇವನು ಮಹಾಶಕ್ತಿ ಎನಿಸಿಕೊಂಡಿರುವ ದೇವರ ಶಕ್ತಿಯೇ” ಎಂದು ಹೇಳುತ್ತಾ ಅವನಿಗೆ ಲಕ್ಷ್ಯಕೊಡುತ್ತಿದ್ದರು.
Kannada BSI Bible 2016
ಚಿಕ್ಕವರು ಮೊದಲು ಗೊಂಡು ದೊಡ್ಡವರ ಪರ್ಯಂತರ ಎಲ್ಲರೂ--ಇವನು ದೇವರ ಮಹಾಶಕ್ತಿ ಎಂದು ಹೇಳುತ್ತಾ ಅವ ನಿಗೆ ಲಕ್ಷ್ಯಕೊಡುತ್ತಿದ್ದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಚಿಕ್ಕವರು ಮೊದಲುಗೊಂಡು ದೊಡ್ಡವರ ಪರ್ಯಂತರ ಎಲ್ಲರೂ - ಇವನು ಮಹಾ ಶಕ್ತಿ ಎನಿಸಿಕೊಂಡಿರುವ ದೇವರ ಶಕ್ತಿಯೇ ಎಂದು ಹೇಳುತ್ತಾ ಅವನಿಗೆ ಲಕ್ಷ್ಯಕೊಡುತ್ತಿದ್ದರು.
Kannada Bible (KNCL) BSI 2016
ಆ ಪಟ್ಟಣದವರೆಲ್ಲರೂ ಹಿರಿಯರು ಕಿರಿಯರು ಎನ್ನದೆ, ಅವನ ಮಾತಿಗೆ ಕಾತರದಿಂದ ಕಿವಿಗೊಡುತ್ತಿದ್ದರು. ‘ದೇವರ ಮಹಾಶಕ್ತಿ’ ಇವನೇ ಎಂದುಕೊಳ್ಳುತ್ತಿದ್ದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆ ಪಟ್ಟಣದಲ್ಲಿಯ ಹಿರಿಯರು, ಕಿರಿಯರು ಎಲ್ಲರೂ ಅವನನ್ನು ಗೌರವಿಸಿ, “ಈ ಮನುಷ್ಯನು ಮಹಾಶಕ್ತಿ ಎನಿಸಿಕೊಂಡ ದೇವರ ಶಕ್ತಿ” ಎಂದು ಹೇಳುತ್ತಿದ್ದರು.