Acts 9:21 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಸೌಲನ ಮಾತನ್ನು ಕೇಳಿದ ಜನರೆಲ್ಲರೂ ವಿಸ್ಮಯಗೊಂಡು, “ಜೆರುಸಲೇಮಿನಲ್ಲಿದ್ದವನು ಈ ಮನುಷ್ಯನೇ. ಈ ಹೆಸರಿನಲ್ಲಿ (ಯೇಸುವಿನ) ನಂಬಿಕೆ ಇಡುವ ಜನರನ್ನು ನಾಶಮಾಡಲು ಇವನು ಪ್ರಯತ್ನಿಸುತ್ತಿದ್ದನು! ಯೇಸುವಿನ ಶಿಷ್ಯರನ್ನು ಬಂಧಿಸಿ ಜೆರುಸಲೇಮಿನಲ್ಲಿರುವ ಮಹಾಯಾಜಕರ ಬಳಿಗೆ ಕೊಂಡೊಯ್ಯಲು ಇವನು ಇಲ್ಲಿಗೂ ಬಂದಿದ್ದಾನೆ” ಎಂದು ಹೇಳಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕೇಳಿದವರೆಲ್ಲರು ಬೆರಗಾಗಿ; “ಯೇಸುಕ್ರಿಸ್ತನ ಹೆಸರು ಹೇಳುವವರನ್ನು ಯೆರೂಸಲೇಮಿನಲ್ಲಿ ನಾಶಮಾಡುತ್ತಿದ್ದವನು ಇವನಲ್ಲವೇ. ಅಂಥವರನ್ನು ಬೇಡಿಹಾಕಿಸಿ ಮುಖ್ಯಯಾಜಕರ ಬಳಿಗೆ ತೆಗೆದುಕೊಂಡು ಹೋಗಬೇಕೆಂದು ಇಲ್ಲಿಗೆ ಬಂದಿರುವನಲ್ಲವೇ” ಎಂದು ಮಾತನಾಡಿಕೊಂಡರು.
Kannada BSI Bible 2016
ಆದರೆ ಕೇಳಿದವರೆಲ್ಲರೂ ಬೆರಗಾಗಿ--ಈ ಹೆಸರು ಹೇಳುವವರನ್ನು ಯೆರೂಸಲೇಮಿನಲ್ಲಿ ಹಾಳು ಮಾಡಿದವನು ಇವನೇ ಅಲ್ಲವೇ, ಅಂಥವರನ್ನು ಬಂಧಿಸಿ ಪ್ರಧಾನಯಾಜಕರ ಬಳಿಗೆ ತೆಗೆದುಕೊಂಡು ಹೋಗಬೇಕೆಂಬ ಉದ್ದೇಶದಿಂದ ಇಲ್ಲಿಗೆ ಬಂದನಲ್ಲವೇ ಎಂದು ಮಾತನಾಡಿಕೊಂಡರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಕೇಳಿದವರೆಲ್ಲರು ಬೆರಗಾಗಿ - ಈ ಹೆಸರು ಹೇಳುವವರನ್ನು ಯೆರೂಸಲೇವಿುನಲ್ಲಿ ಹಾಳುಮಾಡಿದವನು ಇವನಲ್ಲವೇ. ಅಂಥವರನ್ನು ಬೇಡಿಹಾಕಿಸಿ ಮಹಾಯಾಜಕರ ಬಳಿಗೆ ತೆಗೆದುಕೊಂಡು ಹೋಗಬೇಕೆಂದೇ ಇಲ್ಲಿಗೆ ಬಂದನಲ್ಲವೇ ಎಂದು ಮಾತಾಡಿಕೊಂಡರು.
Kannada Bible (KNCL) BSI 2016
ಅವನ ಬೋಧನೆಯನ್ನು ಕೇಳಿದವರೆಲ್ಲರೂ ಚಕಿತರಾದರು. “ಜೆರುಸಲೇಮಿನಲ್ಲಿ ಯೇಸುವಿನ ನಾಮಸ್ಮರಣೆ ಮಾಡುತ್ತಿದ್ದವರನ್ನು ಬಲಿಹಾಕುತ್ತಿದ್ದವನು ಇವನೇ ಅಲ್ಲವೇ? ಅಂಥವರನ್ನು ಬಂಧಿಸಿ ಮುಖ್ಯಯಾಜಕರ ಬಳಿಗೆ ಎಳೆದೊಯ್ಯುವ ಉದ್ದೇಶದಿಂದಲೇ ಅಲ್ಲವೆ ಇವನು ಇಲ್ಲಿಗೆ ಬಂದಿರುವುದು?” ಎಂದು ಪ್ರಶ್ನಿಸತೊಡಗಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನ ಮಾತುಗಳನ್ನು ಕೇಳಿದವರಿಗೆ ಅತ್ಯಾಶ್ಚರ್ಯವಾಯಿತು. ಅವರು, “ಈ ಹೆಸರನ್ನು ಹೇಳುವವರೆಲ್ಲರಿಗೆ ಯೆರೂಸಲೇಮಿನಲ್ಲಿ ತೊಂದರೆಕೊಟ್ಟು ಗೊಂದಲವೆಬ್ಬಿಸಿದವನು ಇವನೇ ಅಲ್ಲವೇ? ಅಂಥವರನ್ನು ಸೆರೆಹಿಡಿದು ಮುಖ್ಯಯಾಜಕರ ಬಳಿಗೆ ಎಳೆದೊಯ್ಯಲು ಇಲ್ಲಿಗೆ ಬಂದವನಲ್ಲವೇ?” ಎಂದು ಪ್ರಶ್ನಿಸಿಕೊಂಡರು.