Amos 1:14 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆದ್ದರಿಂದ ನಾನು ರಬ್ಬದ ಗೋಡೆಗಳಲ್ಲಿ ಬೆಂಕಿ ಹಾಕುವೆನು. ಆ ಬೆಂಕಿಯು ರಬ್ಬದ ಉನ್ನತ ಗೋಪುರಗಳನ್ನು ನಾಶಮಾಡುವದು; ಹಗಲಿನ ಯುದ್ಧದ ಕೂಗಾಟದಂತೆಯೂ ಸುಂಟರಗಾಳಿಯಂತೆಯೂ ಸಂಕಟವು ಅವರ ದೇಶಕ್ಕೆ ಬರುವದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾನು ರಬ್ಬದ ಕೋಟೆಯನ್ನು ಬೆಂಕಿಯಿಂದ ಉರಿಸುವೆನು, ಅದು ಅದರ ಅರಮನೆಗಳನ್ನು ನುಂಗಿಬಿಡುವುದು; ಆ ಯುದ್ಧದ ದಿನದಲ್ಲಿ ಆರ್ಭಟವಾಗುವುದು, ಆ ಸುಂಟರಗಾಳಿಯಂತ ದಿನದಲ್ಲಿ ಪ್ರಚಂಡ ಕಾದಾಟವೂ ಉಂಟಾಗುವುದು.
Kannada BSI Bible 2016
ಆದರೆ ನಾನು ರಬ್ಬದ ಗೋಡೆಯಲ್ಲಿ ಬೆಂಕಿಯನ್ನು ಹತ್ತಿಸುವೆನು; ಅದು ಯುದ್ಧದ ದಿನದಲ್ಲಿ ಆರ್ಭಟದ ಸಂಗಡವೂ ಬಿರುಗಾಳಿಯ ದಿನದಲ್ಲಿ ಸುಳಿಗಾಳಿಯ ಸಂಗಡವೂ ಅಲ್ಲಿಯ ಅರಮನೆಗಳನ್ನು ನುಂಗಿಬಿಡುವದು.ಅವರ ಅರಸನು ತಾನು ತನ್ನ ರಾಜಕುಮಾರರ ಸಂಗಡ ಸೆರೆಗೆ ಹೋಗುವನೆಂದು ಕರ್ತನು ಹೇಳುತ್ತಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ನಾನು ರಬ್ಬದ ಕೋಟೆಯಲ್ಲಿ ಬೆಂಕಿಯನ್ನು ಉರಿಸುವೆನು, ಅದು ಅವರ ಅರಮನೆಗಳನ್ನು ನುಂಗಿಬಿಡುವದು; ಆ ಯುದ್ಧದಿನದಲ್ಲಿ ಆರ್ಭಟವಾಗುವದು. ಆ ಸುಂಟರಗಾಳಿಯ ದಿವಸದಲ್ಲಿ ರೋಷಮಾರುತವು ಬೀಸುವದು;
Kannada Bible (KNCL) BSI 2016
ಆದಕಾರಣ ನಾನು ರಬ್ಬದ ಪ್ರಾಕಾರಗಳ ಮೇಲೆ ಬೆಂಕಿಯನ್ನು ಸುರಿಸುವೆನು. ಅದು ಅದರ ಕೋಟೆಕೊತ್ತಲಗಳನ್ನು ಕಬಳಿಸಿಬಿಡುವುದು. ಆಗ ಯುದ್ಧಾರ್ಭಟವೂ ಚಂಡಮಾರುತದಂಥ ಪ್ರಚಂಡ ಕಾದಾಟವೂ ಉಂಟಾಗುವುವು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಾನು ರಬ್ಬದ ಪ್ರಾಕಾರಗಳ ಮೇಲೆ ಬೆಂಕಿಯನ್ನು ಸುರಿಸುವೆನು. ಅದು ಅದರ ಕೋಟೆಗಳನ್ನು ದಹಿಸಿಬಿಡುವುದು. ಆಗ ಯುದ್ಧಾರ್ಭಟವೂ, ಚಂಡಮಾರುತದಂಥ ಪ್ರಚಂಡ ಕಾದಾಟವೂ ಉಂಟಾಗುವುವು.