Amos 2:11 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಿಮ್ಮ ಕೆಲವು ಗಂಡುಮಕ್ಕಳನ್ನು ನಾನು ಪ್ರವಾದಿಗಳನ್ನಾಗಿ ಮಾಡಿದೆನು. ಇನ್ನು ಕೆಲವರನ್ನು ನಾಜೀರರನ್ನಾಗಿ ಮಾಡಿದೆನು. ಇಸ್ರೇಲ್ ಜನರೇ, ಇವು ಸತ್ಯವಾದ ಮಾತುಗಳು,” ಇವು ಯೆಹೋವನ ನುಡಿಗಳು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಿಮ್ಮ ಪುತ್ರರಲ್ಲಿ ಪ್ರವಾದಿಗಳನ್ನೂ ಮತ್ತು ನಿಮ್ಮ ಯುವಕರಲ್ಲಿ ಪ್ರತಿಷ್ಠಿತರನ್ನೂ ಎಬ್ಬಿಸಿದೆನು. ಇಸ್ರಾಯೇಲಿನ ಜನರೇ, ಇದು ಸತ್ಯವಲ್ಲವೋ?” ಎಂದು ಯೆಹೋವನು ಅನ್ನುತ್ತಾನೆ.
Kannada BSI Bible 2016
ನಾನು ನಿಮ್ಮ ಕುಮಾರ ರಲ್ಲಿ ಪ್ರವಾದಿಗಳನ್ನು ನಿಮ್ಮ ಯೌವನಸ್ಥರಲ್ಲಿ ನಾಜೀರರನ್ನು ಎಬ್ಬಿಸಿದೆನು. ಓ ಇಸ್ರಾಯೇಲಿನ ಮಕ್ಕಳೇ, ಇದು ಹೀಗಲ್ಲವೋ ಎಂದು ಕರ್ತನು ಹೇಳುತ್ತಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ನಿಮ್ಮ ಪುತ್ರರಲ್ಲಿ ಪ್ರವಾದಿಗಳನ್ನೂ ನಿಮ್ಮ ಯುವಕರಲ್ಲಿ ಪ್ರತಿಷ್ಠಿತರನ್ನೂ ಸಿದ್ಧಪಡಿಸಿದೆನು. ಇಸ್ರಾಯೇಲ್ಯರೇ, ಇದು ಸತ್ಯವಲ್ಲವೋ ಎಂದು ಯೆಹೋವನು ಅನ್ನುತ್ತಾನೆ.
Kannada Bible (KNCL) BSI 2016
ನಿಮ್ಮ ಪುತ್ರರಲ್ಲಿ ಕೆಲವರನ್ನು ಪ್ರವಾದಿಗಳನ್ನಾಗಿ, ನಿಮ್ಮ ಯುವಜನರಲ್ಲಿ ಕೆಲವರನ್ನು ನಾಜೀರರನ್ನಾಗಿ ಸಿದ್ಧಪಡಿಸಿದವನು ನಾನೇ. ಇಸ್ರಯೇಲಿನ ಜನರೇ, ಇದು ನಿಜವಲ್ಲವೇ? ನೀವೇ ಹೇಳಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ನಾನು ನಿಮ್ಮ ಪುತ್ರರಲ್ಲಿ ಪ್ರವಾದಿಗಳನ್ನೂ ನಿಮ್ಮ ಯೌವನಸ್ಥರಲ್ಲಿ ನಾಜೀರರನ್ನೂ ಎಬ್ಬಿಸಿದೆನು. ಇಸ್ರಾಯೇಲಿನ ಜನರೇ, ಇದು ಸರಿಯಲ್ಲವೋ?” ಎಂದು ಯೆಹೋವ ದೇವರು ಹೇಳುತ್ತಾರೆ.