Amos 3:11 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆದ್ದರಿಂದ ಯೆಹೋವನು ಹೇಳುವುದೇನೆಂದರೆ, “ಆ ದೇಶಕ್ಕೆ ಒಬ್ಬ ಶತ್ರುವು ಬರುವನು. ಅವನು ನಿಮ್ಮ ಬಲವನ್ನೇ ಮುರಿಯುವನು. ನೀವು ಉನ್ನತ ಬುರುಜುಗಳಲ್ಲಿ ಅಡಿಗಿಸಿಟ್ಟಿದ್ದ ವಸ್ತುಗಳನ್ನು ಕಿತ್ತುಕೊಳ್ಳುವನು.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಹೀಗಿರಲು, ಕರ್ತನಾದ ಯೆಹೋವನು ಇಂತೆನ್ನುತ್ತಾನೆ: “ಶತ್ರುವು ನಿನ್ನ ದೇಶವನ್ನು ಮುತ್ತಿಕೊಳ್ಳುವನು. ನಿನ್ನ ಶಕ್ತಿಯನ್ನು ಕುಂದಿಸಿಬಿಡುವನು ಮತ್ತು ನಿನ್ನ ಅರಮನೆಗಳು ಸೂರೆಯಾಗುವವು.”
Kannada BSI Bible 2016
ಆದದರಿಂದ ಕರ್ತನಾದ ದೇವರು ಹೀಗೆ ಹೇಳುತ್ತಾನೆ--ವಿರೋಧಿಯು ದೇಶದ ಸುತ್ತಲೂ ಇರುವನು; ನಿನ್ನಲ್ಲಿರುವ ನಿನ್ನ ಬಲವನ್ನು ತಗ್ಗಿಸುವನು; ನಿನ್ನ ಅರಮನೆಗಳು ಸೂರೆಯಾಗುವವು.
Kannada BSI JV (ಕನ್ನಡ ಸತ್ಯವೇದವು J.V. (BSI))
ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಶತ್ರುವು ನಿನ್ನ ದೇಶವನ್ನು ಮುತ್ತಿಕೊಳ್ಳುವನು, ನಿನ್ನ ಶಕ್ತಿಯನ್ನು ಕುಂದಿಸಿಬಿಡುವನು, ನಿನ್ನ ಅರಮನೆಗಳು ಸೂರೆಯಾಗುವವು.
Kannada Bible (KNCL) BSI 2016
ಇಂತಿರಲು ಸ್ವಾಮಿ ಸರ್ವೇಶ್ವರ ಹೇಳುವುದೇನೆಂದರೆ: “ಶತ್ರುಗಳು ನಿಮ್ಮ ನಾಡಿಗೆ ಮುತ್ತಿಗೆಹಾಕುವರು. ನಿಮ್ಮ ಕೋಟೆಕೊತ್ತಲಗಳನ್ನು ನೆಲಸಮಮಾಡುವರು. ನಿಮ್ಮ ಸೌಧಗಳನ್ನು ಸೂರೆಮಾಡುವರು.”
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ವಿರೋಧಿಯು ದೇಶದ ಸುತ್ತಲೂ ಇರುವನು. ನಿನ್ನ ಬಲವನ್ನು ತಗ್ಗಿಸುವನು. ನಿನ್ನ ಅರಮನೆಗಳು ಸೂರೆಯಾಗುವುವು.”