Amos 3:12 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೆಹೋವನು ಹೇಳುವುದೇನೆಂದರೆ, “ಒಂದುವೇಳೆ ಸಿಂಹವು ಒಂದು ಕುರಿಮರಿಯ ಮೇಲೆ ಎರಗಿದರೆ ಕುರುಬನು ಅದನ್ನು ರಕ್ಷಿಸಲು ಪ್ರಯತ್ನಿಸಾನು. ಆದರೆ ಕುರುಬನು ಆ ಕುರಿಮರಿಯ ಒಂದು ಭಾಗವನ್ನು ಮಾತ್ರ ಕಾಪಾಡಿಯಾನು. ಸಿಂಹದ ಬಾಯಿಂದ ಕುರಿಯ ಎರಡು ಕಾಲುಗಳನ್ನೊ ಕಿವಿಯ ಒಂದು ಭಾಗವನ್ನೋ ಎಳೆದು ರಕ್ಷಿಸಿಯಾನು. ಅದೇ ರೀತಿಯಲ್ಲಿ ಬಹುತೇಕ ಇಸ್ರೇಲರು ರಕ್ಷಿಸಲ್ಪಡುವದಿಲ್ಲ. ಸಮಾರ್ಯದಲ್ಲಿರುವ ಜನರು ತಮ್ಮ ಹಾಸಿಗೆಯ ಒಂದು ಮೂಲೆಯನ್ನಾಗಲಿ ಅಥವಾ ಮಂಚದ ಮೇಲಿನ ಬಟ್ಟೆಯ ಒಂದು ತುಂಡನ್ನಾಗಲಿ ಉಳಿಸಿಕೊಳ್ಳುವರು.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೋವನು ಇಂತೆನ್ನುತ್ತಾನೆ: “ ಸಿಂಹದ ಬಾಯೊಳಗಿಂದ ಕುರುಬನು ತನ್ನ ಕುರಿಗಳ ಎರಡು ಕಾಲನ್ನೂ, ಅಥವಾ ಕಿವಿಯ ಒಂದು ತುಂಡನ್ನೂ, ಹೇಗೆ ರಕ್ಷಿಸುವನೋ, ಹಾಗೆಯೇ ಸಮಾರ್ಯದೊಳಗೆ ಹಾಸಿಗೆಯ ಮೂಲೆಯಲ್ಲಿಯೂ, ಮಂಚದ ಪಟ್ಟೇದಿಂಬುಗಳಲ್ಲಿಯೂ, ಒರಗಿಕೊಳ್ಳುವ ಇಸ್ರಾಯೇಲರ ಸ್ವಲ್ಪ ಭಾಗ ಮಾತ್ರ ರಕ್ಷಿಸಲ್ಪಡುವುದು.”
Kannada BSI Bible 2016
ಕರ್ತನು ಹೀಗೆ ಹೇಳುತ್ತಾನೆ--ಕುರುಬರು ಸಿಂಹದ ಬಾಯಲ್ಲಿರುವ ಎರಡು ಕಾಲನ್ನು ಅಥವಾ ಕಿವಿಯ ಒಂದು ತುಂಡನ್ನು ಹೊರ ತೆಗೆಯುವ ಹಾಗೆ ಸಮಾರ್ಯ ದಲ್ಲಿ ಹಾಸಿಗೆಯ ಮೂಲೆಯಲ್ಲಿಯೂ ದಮಸ್ಕದಲ್ಲಿ ಸುಪ್ಪತ್ತಿಗೆಯಲ್ಲಿಯೂ ಇರುವ ಇಸ್ರಾಯೇಲಿನ ಮಕ್ಕಳು ತಪ್ಪಿಸಲ್ಪಡುವರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೋವನು ಇಂತೆನ್ನುತ್ತಾನೆ - ಸಿಂಹದ ಬಾಯೊಳಗಿಂದ ಎರಡು ಕಾಲುಗಳಾಗಲಿ ಕಿವಿಯ ತುಂಡಾಗಲಿ ಹೇಗೆ ಕುರುಬನಿಂದ ರಕ್ಷಿಸಲ್ಪಡುವದೋ ಹಾಗೆಯೇ ಸಮಾರ್ಯದೊಳಗೆ ಗದ್ದುಗೆಯ ಮೂಲೆಯಲ್ಲಿಯೂ ಮಂಚದ ಪಟ್ಟೇದಿಂಬುಗಳಲ್ಲಿಯೂ ಒರಗಿಕೊಳ್ಳುವ ಇಸ್ರಾಯೇಲ್ಯರ [ಸ್ವಲ್ಪಭಾಗ ಮಾತ್ರ] ರಕ್ಷಿಸಲ್ಪಡುವದು.
Kannada Bible (KNCL) BSI 2016
ಸೇನಾಧೀಶ್ವರ ಸರ್ವೇಶ್ವರ ಇಂತೆನ್ನುತ್ತಾರೆ: “ಸಿಂಹದ ಬಾಯಿಗೆ ಸಿಕ್ಕಿದ ಕುರಿಯ ಅಂಗಗಳಲ್ಲಿ ಕಿವಿಕಾಲು ಮಾತ್ರ ಕುರುಬನಿಗೆ ದಕ್ಕೀತು. ಅಂತೆಯೇ ಸಮಾರ್ಯದ ಸುಖಾಸನಗಳಲ್ಲೂ ಸುಪ್ಪತ್ತಿಗೆ ಮೇಲೂ ಹಾಯಾಗಿ ಒರಗಿಕೊಂಡಿರುವ ಇಸ್ರಯೇಲರಲ್ಲಿ ಕೆಲವೇ ಕೆಲವರು ಮಾತ್ರ ಉಳಿಯುವರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆಹೋವ ದೇವರು ಹೀಗೆ ಹೇಳುತ್ತಾರೆ: “ಹೇಗೆ ಕುರುಬನು ಸಿಂಹದ ಬಾಯಿಯಿಂದ ಎರಡು ಕಾಲಿನ ಎಲಬುಗಳನ್ನು ಅಥವಾ ಕಿವಿಯ ಒಂದು ತುಂಡನ್ನು ರಕ್ಷಿಸಲು ಪ್ರಯತ್ನಿಸುತ್ತಾನೋ ಹಾಗೆಯೇ ಸಮಾರ್ಯದಲ್ಲಿ ವಾಸಿಸುವ ಇಸ್ರಾಯೇಲರು ಹಾಸಿಗೆಯ ತಲೆ ಮತ್ತು ಮಂಚದ ಬಟ್ಟೆಯ ತುಂಡುಗಳೊಂದಿಗೆ ಸಂರಕ್ಷಣೆ ಹೊಂದುತ್ತಾರೆ.”