Amos 3:4 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅಡವಿಯಲ್ಲಿರುವ ಸಿಂಹವು ಪ್ರಾಣಿಯನ್ನು ಹಿಡಿದ ನಂತರವೇ ಗರ್ಜಿಸುವದು. ಪ್ರಾಯದ ಸಿಂಹವು ತನ್ನ ಗವಿಯಲ್ಲಿ ಗರ್ಜಿಸಿದರೆ ಅದು ಒಂದು ಪ್ರಾಣಿಯನ್ನು ಹಿಡಿಯಿತು ಎಂದು ಅರ್ಥ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಬೇಟೆಯ ಬಲಿ ಕಾಣದೇ ಸಿಂಹವು ಅರಣ್ಯದಲ್ಲಿ ಗರ್ಜಿಸುವುದೋ? ಏನನ್ನೂ ಬೇಟೆಯಾಡದೆ ಪ್ರಾಯದ ಸಿಂಹವು ಗವಿಯಲ್ಲಿ ಕುಳಿತು ಗುರುಗುಟ್ಟುವುದೋ?
Kannada BSI Bible 2016
ಬೇಟೆ ಇಲ್ಲದಿದ್ದರೆ ಅಡವಿಯಲ್ಲಿ ಸಿಂಹವು ಗರ್ಜಿಸುವದೇ? ಏನಾದರೂ ಹಿಡಿಯದಿದ್ದರೆ ಗುಹೆಯಲ್ಲಿರುವ ಎಳೇ ಸಿಂಹವು ಅರ ಚುವದೇ?
Kannada BSI JV (ಕನ್ನಡ ಸತ್ಯವೇದವು J.V. (BSI))
ಬೇಟೆಯಿಲ್ಲದೆ ಸಿಂಹವು ಅರಣ್ಯದಲ್ಲಿ ಗರ್ಜಿಸುವದೋ? ಏನೂ ಹಿಡಿದುಕೊಂಡಿರದೆ ಪ್ರಾಯದ ಸಿಂಹವು ಗವಿಯಲ್ಲಿ ಗುರುಗುಟ್ಟುವದೋ?
Kannada Bible (KNCL) BSI 2016
ಬೇಟೆ ಕಂಡಾಗಲ್ಲದೆ ಸಿಂಹವು ಕಾಡಿನಲ್ಲಿ ಗರ್ಜಿಸುವುದುಂಟೆ? ಏನನ್ನೂ ಹಿಡಿಯದೆ ಯುವಸಿಂಹವು ಗುಹೆಯಲ್ಲೆ ಗುರುಗುಟ್ಟುವುದುಂಟೆ?
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಬೇಟೆ ಇಲ್ಲದಿದ್ದರೆ, ಅಡವಿಯಲ್ಲಿ ಸಿಂಹವು ಗರ್ಜಿಸುವುದೋ? ಏನಾದರೂ ಹಿಡಿಯದಿದ್ದರೆ, ಗುಹೆಯಲ್ಲಿರುವ ಎಳೆಯ ಸಿಂಹವು ಅರಚುವುದೋ?