Amos 5:6 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೆಹೋವನ ಬಳಿಗೆ ಹೋಗು. ಆಗ ಜೀವಿಸುವಿ. ಯೆಹೋವನ ಬಳಿಗೆ ನೀನು ಹೋಗದಿದ್ದಲ್ಲಿ ಯೋಸೇಫನ ಮನೆತನಕ್ಕೆ ಬೆಂಕಿಯು ಹಿಡಿಯುವುದು. ಆ ಬೆಂಕಿಯು ಯೋಸೇಫನ ಮನೆಯನ್ನು ದಹಿಸುವದು. ಬೇತೇಲಿನಲ್ಲಿ ಅದನ್ನು ಯಾರೂ ನಂದಿಸಲಾರರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೋವನ ಕಡೆಗೆ ತಿರುಗಿಕೊಂಡು ಬದುಕಿರಿ, ತಿರುಗಿಕೊಳ್ಳದಿದ್ದರೆ ಆತನು ಬೆಂಕಿಯೋಪಾದಿಯಲ್ಲಿ ಯೋಸೇಫನ ವಂಶದೊಳಗೆ ಪ್ರವೇಶಿಸುವನು. ಅದು ದಹಿಸಿಬಿಡುವುದು, ಅದನ್ನು ಆರಿಸುವುದಕ್ಕೆ ಬೇತೇಲಿನಲ್ಲಿ ಯಾರೂ ಇರುವುದಿಲ್ಲ.
Kannada BSI Bible 2016
ನೀವು ಕರ್ತನನ್ನು ಹುಡುಕಿ ಬದುಕಿರಿ, ಇಲ್ಲದಿದ್ದರೆ ಆತನು ಬೆಂಕಿಯಂತೆ ಯೋಸೇಫನ ಮನೆತನದಲ್ಲಿ ಪ್ರವೇಶಿಸುವನು; ಅದು ನುಂಗಿಬಿಡುವದು, ಅದನ್ನು ಆರಿಸುವವರು ಬೇತೇಲಿನಲ್ಲಿ ಯಾರೂ ಇರುವದಿಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೋವನ ಕಡೆಗೆ ತಿರುಗಿಕೊಳ್ಳಿರಿ, ಬದುಕುವಿರಿ, ತಿರುಗಿಕೊಳ್ಳದಿದ್ದರೆ ಆತನು ಬೆಂಕಿಯೋಪಾದಿಯಲ್ಲಿ ಯೋಸೇಫನ ವಂಶದೊಳಗೆ ನುಗ್ಗಿಯಾನು; ನುಂಗುವ ಆತನ ರೋಷಾಗ್ನಿಯನ್ನು ಆರಿಸುವದಕ್ಕೆ ಬೇತೇಲಿನಲ್ಲಿ ಯಾರೂ ಇರರು.
Kannada Bible (KNCL) BSI 2016
ಸರ್ವೇಶ್ವರಸ್ವಾಮಿಗೆ ಅಭಿಮುಖರಾಗಿರಿ, ನೀವು ಬದುಕುವಿರಿ. ಇಲ್ಲವಾದರೆ ಅವರು ಬೆಂಕಿಯೋಪಾದಿ ಜೋಸೆಫನ ಮನೆತನದ ಮೇಲೆ ಎರಗಿಯಾರು. ಬೇತೇಲಿನ ಜನರನ್ನು ಭಸ್ಮಮಾಡಿಯಾರು. ಆ ಬೆಂಕಿಯನ್ನು ಯಾರೂ ಆರಿಸರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನೀವು ಯೆಹೋವ ದೇವರನ್ನು ಹುಡುಕಿರಿ ಮತ್ತು ಬದುಕಿರಿ. ಇಲ್ಲದಿದ್ದರೆ, ಆತನು ಬೆಂಕಿಯಂತೆ ಯೋಸೇಫನ ಗೋತ್ರಗಳಲ್ಲಿ ಪ್ರವೇಶಿಸುವನು. ಅದು ದಹಿಸಿಬಿಡುವುದು, ಅದನ್ನು ಆರಿಸುವವರು ಬೇತೇಲಿನಲ್ಲಿ ಯಾರೂ ಇರುವುದಿಲ್ಲ.