Amos 6:11 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನೋಡು, ಯೆಹೋವನು ಆಜ್ಞೆಯನ್ನು ಕೊಡುವನು. ಆಗ ಭವ್ಯಭವನಗಳು ಒಡೆದು ಚೂರುಚೂರಾಗಿ ಬೀಳುವವು. ಮತ್ತು ಸಣ್ಣ ಮನೆಗಳು ಚಿಂದಿಚಿಂದಿಯಾಗಿ ಚೂರಾಗುವವು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇಗೋ, ನೋಡಿರಿ, ಯೆಹೋವನು ಆಜ್ಞಾಪಿಸಲು, ದೊಡ್ಡ ಮನೆಯು ಕೆಡವಲ್ಪಟ್ಟು ಚೂರುಚೂರಾಯಿತು, ಚಿಕ್ಕ ಮನೆಯೂ ಮುರಿದುಹೋಗುವುದು.
Kannada BSI Bible 2016
ಇಗೋ, ಕರ್ತನು ಆಜ್ಞಾಪಿಸುತ್ತಾನೆ; ಆತನು ದೊಡ್ಡ ಮನೆಯನ್ನು ಸೀಳುಗಳಿಂದಲೂ ಚಿಕ್ಕ ಮನೆಯನ್ನು ಬಿರುಕುಗಳಿಂದಲೂ ಹೊಡೆಯುವನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇಗೋ, ಯೆಹೋವನು ಆಜ್ಞಾಪಿಸಲು ದೊಡ್ಡ ಮನೆಯು ಹೊಡೆಯಲ್ಪಟ್ಟು ಚೂರುಚೂರಾಗುವದು, ಚಿಕ್ಕ ಮನೆಯೂ ಮುರಿದುಹೋಗುವದು.
Kannada Bible (KNCL) BSI 2016
ಇಗೋ, ಸರ್ವೇಶ್ವರ ಆಜ್ಞಾಪಿಸಲು, ಕುಸಿದುಬೀಳುವುವು ಮಹಾಸೌಧಗಳು, ನುಚ್ಚುನೂರಾಗುವುವು ಚಿಕ್ಕಚಿಕ್ಕ ಮನೆಗಳು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಏಕೆಂದರೆ, ಯೆಹೋವ ದೇವರು ಆಜ್ಞಾಪಿಸುತ್ತಾರೆ, ಆತನು ದೊಡ್ಡ ಮನೆಯನ್ನು ಸೀಳುಗಳಿಂದಲೂ ಚಿಕ್ಕ ಮನೆಯನ್ನು ಬಿರುಕುಗಳಿಂದಲೂ ಹೊಡೆಯುವನು.