Amos 7:11 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅಮೋಸನು, ‘ಯಾರೊಬ್ಬಾಮನು ಕತ್ತಿಯಿಂದ ಸಂಹರಿಸಲ್ಪಡುವನು ಮತ್ತು ಇಸ್ರೇಲಿನ ಜನರು ಸೆರೆಹಿಡಿಯಲ್ಪಟ್ಟವರಾಗಿ ಪರದೇಶಕ್ಕೆ ಒಯ್ಯಲ್ಪಡುವರು’“ ಎಂದು ಹೇಳಿದ್ದಾನೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅದಕ್ಕೆ ಆಮೋಸನು, “ಯಾರೊಬ್ಬಾಮನು ಖಡ್ಗದಿಂದ ಹತನಾಗುವನು. ಇಸ್ರಾಯೇಲರು ಖಂಡಿತವಾಗಿ ಸ್ವದೇಶದಿಂದ ಸೆರೆಯಾಗಿ ಒಯ್ಯಲ್ಪಡುವರು” ಎಂದು ಹೇಳಿಕಳುಹಿಸಿದನು.
Kannada BSI Bible 2016
ಯಾರೊಬ್ಬಾಮನು ಕತ್ತಿಯಿಂದ ಸಾಯುವನೆಂದೂ ಇಸ್ರಾಯೇಲ್ಯರು ನಿಶ್ಚಯವಾಗಿ ತಮ್ಮ ಸ್ವದೇಶದಿಂದ ಸೆರೆಯಾಗಿ ಒಯ್ಯಲ್ಪಡುವರೆಂದೂ ಆಮೋಸನು ಹೇಳಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನು - ಯಾರೊಬ್ಬಾಮನು ಖಡ್ಗದಿಂದ ಹತನಾಗುವನು, ಇಸ್ರಾಯೇಲು ಸ್ವದೇಶದಿಂದ ಸೆರೆಯಾಗಿ ಒಯ್ಯಲ್ಪಡುವದು ಖಂಡಿತ ಎಂದು ನುಡಿದಿದ್ದಾನೆ ಎಂಬದಾಗಿ ಹೇಳಿಕಳುಹಿಸಿದನು.
Kannada Bible (KNCL) BSI 2016
ಏಕೆಂದರೆ, “ಯಾರೊಬ್ಬಾಮನು ಖಡ್ಗದಿಂದ ಹತನಾಗುವನು. ಇಸ್ರಯೇಲ್ ಸ್ವಂತ ನಾಡಿನಿಂದ ಪರದೇಶಕ್ಕೆ ಒಯ್ಯಲ್ಪಡುವುದು ಖಂಡಿತ ಎಂದು ಅವನು ನುಡಿದಿದ್ದಾನೆ.”
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಮೋಸನು ಹೇಳಿದ್ದೇನೆಂದರೆ: “ಯಾರೊಬ್ಬಾಮನು ಖಡ್ಗದಿಂದ ಸಾಯುವನೆಂದೂ ಇಸ್ರಾಯೇಲರು ನಿಶ್ಚಯವಾಗಿ ತಮ್ಮ ಸ್ವದೇಶದಿಂದ ಸೆರೆಯಾಗಿ ಕರೆದೊಯ್ಯುವರು.”