Amos 9:6 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯೆಹೋವನು ಆಕಾಶದ ಮೇಲೆ ತನಗಾಗಿ ಮೇಲುಪ್ಪರಿಗೆಗಳನ್ನು ಕಟ್ಟಿದನು. ಭೂಮಿಯ ಮೇಲೆ ಆಕಾಶವನ್ನು ಹರಡಿದನು. ಸಮುದ್ರದ ನೀರನ್ನು ಕರೆದು ಭೂಮಿಯ ಮೇಲೆ ಮಳೆಗೆರೆಯುವಂತೆ ಮಾಡುವನು. ಆತನ ಹೆಸರು ಯೆಹೋವ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಉನ್ನತಲೋಕದಲ್ಲಿ ಉಪ್ಪರಿಗೆಯನ್ನು ಅನೇಕ ಅಂತಸ್ತನ್ನಾಗಿ ಕಟ್ಟಿಕೊಂಡು, ಭೂಲೋಕದ ಮೇಲೆ ಗುಮ್ಮಟವನ್ನು ಸ್ಥಾಪಿಸಿಕೊಂಡಿದ್ದಾನೆ. ಸಮುದ್ರದ ನೀರನ್ನು ಸೇದಿ, ಭೂಮಂಡಲದ ಮೇಲೆ ಹೊಯ್ಯುತ್ತಾನೆ, ಯೆಹೋವನೆಂಬುವುದೇ ಆತನ ನಾಮಧೇಯ.
Kannada BSI Bible 2016
ಆಕಾಶದಲ್ಲಿ ಉಪ್ಪರಿಗೆ ಗಳನ್ನು ಕಟ್ಟಿಕೊಂಡು ಭೂಮಿಯ ಮೇಲೆ ತಮ ತಂಡಗಳನ್ನು ಸ್ಥಾಪಿಸಿ ಸಮುದ್ರದ ನೀರನ್ನು ಕರೆದು ಅದನ್ನು ಭೂಮಿಯ ಮೇಲೆ ಒಯ್ಯುವಂತೆ ಮಾಡು ವವನು ಆತನೇ. ಆತನ ಹೆಸರು ಕರ್ತನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಉನ್ನತಲೋಕದಲ್ಲಿ ಉಪ್ಪರಿಗೆಯನ್ನು ಅನೇಕ ಅಂತಸ್ತಾಗಿ ಕಟ್ಟಿಕೊಂಡು ಭೂಲೋಕದ ಮೇಲೆ ಗುಮ್ಮಟವನ್ನು ಸ್ಥಾಪಿಸಿಕೊಂಡಿದ್ದಾನೆ; ಸಮುದ್ರದ ನೀರನ್ನು ಕರೆದು ಭೂಮಂಡಲದ ಮೇಲೆ ಹೊಯ್ಯುತ್ತಾನೆ; ಯೆಹೋವನೆಂಬದೇ ಆತನ ನಾಮಧೇಯ.
Kannada Bible (KNCL) BSI 2016
ಉನ್ನತದಲ್ಲಿ ಹಲವು ಉಪ್ಪರಿಗೆಗಳನ್ನು ನಿರ್ಮಿಸುವವ ಆತನೆ ಭುವಿಯಲ್ಲಿ ಗುಮ್ಮಟವನ್ನು ಸ್ಥಾಪಿಸಿಕೊಂಡವನು ಆತನೆ ಸಾಗರದ ನೀರನ್ನು ಸೇದಿ ಧರೆಯ ಮೇಲೆ ಸುರಿಯುವವ ಆತನೆ ಆತನ ನಾಮಧೇಯ ಸರ್ವೇಶ್ವರಸ್ವಾಮಿ ಎಂಬುದೇ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಕಾಶದಲ್ಲಿ ಉಪ್ಪರಿಗೆಗಳನ್ನು ಕಟ್ಟಿಕೊಂಡು, ಭೂಮಿಯ ಮೇಲೆ ತಮ್ಮ ತಂಡಗಳನ್ನು ಸ್ಥಾಪಿಸಿ, ಸಮುದ್ರದ ನೀರನ್ನು ಕರೆದು, ಅದನ್ನು ಭೂಮಿಯ ಮೇಲೆ ಹೊಯ್ಯುವಂತೆ ಮಾಡುವಾತರು ಅವರೇ. ಅವರ ಹೆಸರು ಯೆಹೋವ ದೇವರು.