Colossians 2:14 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ದೇವರ ನಿಯಮಗಳನ್ನು ಉಲ್ಲಂಘಿಸಿದ್ದರಿಂದ ನಾವು ಅಪರಾಧಿಗಳಾಗಿದ್ದೆವು. ನಮ್ಮ ಮೇಲೆ ಹೊರಿಸಲಾದ ದೋಷಾರೋಪಣೆಯ ಪಟ್ಟಿಯಲ್ಲಿ ನಾವು ಉಲ್ಲಂಘಿಸಿದ ಆಜ್ಞೆಗಳನ್ನೆಲ್ಲ ಲಿಖಿತಗೊಳಿಸಲಾಗಿತ್ತು. ಆದರೆ ದೇವರು ನಮ್ಮ ಅಪರಾಧಗಳನ್ನೆಲ್ಲ ಕ್ಷಮಿಸಿ ಅವುಗಳನ್ನು ಶಿಲುಬೆಗೆ ಜಡಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಮ್ಮ ಮೇಲೆ ದೋಷಾರೋಪಣೆ ಮಾಡಿದಂಥ ಆಜ್ಞಾರೂಪವಾಗಿದ್ದಂಥ ಪತ್ರವನ್ನು ತೊಡೆದುಹಾಕಿ ಅದನ್ನು ಶಿಲುಬೆಗೆ ಜಡಿದು ಇಲ್ಲದಂತಾಗಿ ಮಾಡಿದನು.
Kannada BSI Bible 2016
ನಮಗೆ ವಿರೋಧವಾಗಿಯೂ ಪ್ರತಿ ಕೂಲವಾಗಿಯೂ ಇದ್ದ ಕೈಬರಹದ ಶಾಸನಗಳನ್ನು ಅಳಿಸಿ ಅದನ್ನು ತನ್ನ ಶಿಲುಬೆಗೆ ಜಡಿದು ಇಲ್ಲದಂತಾಗ ಮಾಡಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆತನು ನಮ್ಮ ಅಪರಾಧಗಳನ್ನೆಲ್ಲಾ ಕ್ಷವಿುಸಿ ನಮ್ಮ ಮೇಲೆ ದೋಷಾರೋಪಣೆಮಾಡಿದಂಥ ಆಜ್ಞಾರೂಪವಾಗಿದ್ದಂಥ ಪತ್ರವನ್ನು ಕೆಡಿಸಿ ಅದನ್ನು ಶಿಲುಬೆಗೆ ಜಡಿದು ಇಲ್ಲದಂತಾಗ ಮಾಡಿದನು.
Kannada Bible (KNCL) BSI 2016
ಅವರು ನಮ್ಮ ಎಲ್ಲಾ ಪಾಪಗಳನ್ನು ಕ್ಷಮಿಸಿದ್ದಾರೆ. ನಮ್ಮನ್ನು ಬಂಧಿಸಿದ್ದ ಧರ್ಮಶಾಸ್ತ್ರದ ವಿಧಿನಿಯಮಗಳನ್ನು ಕ್ರಿಸ್ತಯೇಸು ತೊಡೆದುಹಾಕಿದ್ದಲ್ಲದೆ ಅವುಗಳನ್ನು ಶಿಲುಬೆಗೆ ಜಡಿದು ನಮ್ಮನ್ನು ಬಿಡುಗಡೆ ಮಾಡಿದ್ದಾರೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಮಗೆ ವಿರೋಧವಾಗಿ ನಿಂತು ನಮ್ಮ ಮೇಲೆ ತಪ್ಪು ಹೊರಿಸುವಂತೆ ಬರೆಯಲಾಗಿದ್ದ ಶಾಸನಗಳನ್ನು ಕ್ರಿಸ್ತ ಯೇಸು ರದ್ದುಮಾಡಿದರು. ಅವುಗಳನ್ನು ಶಿಲುಬೆಯ ಮೇಲೆ ಜಡಿದು ಇಲ್ಲದಂತೆ ಮಾಡಿದರು.