Colossians 2:22 — Compare Translations

5 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಪ್ರಾಪಂಚಿಕ ವಿಷಯಗಳ ಕುರಿತಾದ ಈ ನಿಯಮಗಳೆಲ್ಲ ಬಳಸಿದ ಮೇಲೆ ನಾಶವಾಗುತ್ತವೆ. ಅವುಗಳು ಜನರ ಆಜ್ಞೆ ಮತ್ತು ಜನರ ಉಪದೇಶಗಳೇ ಹೊರತು ದೇವರವಲ್ಲ.
Kannada BSI Bible 2016
(ಆ ಪದಾರ್ಥಗಳೆಲ್ಲವೂ ಬಳಸುವ ದರಲ್ಲಿ ನಾಶವಾಗುತ್ತವೆ);ಅಂಥ ಉಪದೇಶಗಳು ಸ್ವೇಚ್ಛಾರಾಧನೆಯಲ್ಲಿಯೂ ವಿನಯದಲ್ಲಿಯೂ ದೇಹ ದಂಡನೆಯಲ್ಲಿಯೂ ಜ್ಞಾನವನ್ನು ತೋರಿಸುವಂಥವು ಗಳಾಗಿರುವದು ನಿಜವೇ. ಆದರೆ ಅವು ಶರೀರವನ್ನಲ್ಲದೆ ಯಾವ ವಿಧದಲ್ಲಿಯೂ ತೃಪ್ತಿ ಪಡಿಸಲಾರವು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅದನ್ನು ಮುಟ್ಟಬೇಡ ಎನ್ನುವ ನಿಬಂಧನೆಗಳಿಗೆ ನಿಮ್ಮನ್ನು ಒಳಗಾಗಮಾಡಿಕೊಳ್ಳುವದೇಕೆ? ಆ ಪದಾರ್ಥಗಳೆಲ್ಲವೂ ಬಳಸುವದರಲ್ಲಿ ನಾಶವಾಗುತ್ತವೆ.
Kannada Bible (KNCL) BSI 2016
ಇವುಗಳೆಲ್ಲವೂ ಬಳಕೆಯಿಂದ ಅಳಿದುಹೋಗುತ್ತವೆ. ಅಲ್ಲದೆ, ಅವೆಲ್ಲವೂ ಮಾನವ ವ್ಯವಸ್ಥಿತ ಬೋಧನೆ ಹಾಗೂ ನಿಬಂಧನೆಗಳು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಈ ಶಾಸನಗಳು ಮಾನವ ಆಜ್ಞೆಗಳ ಹಾಗೂ ಬೋಧನೆಗಳ ಅನುಸಾರವಾಗಿ ಬಳಕೆಯಿಂದ ಅಳಿದುಹೋಗುತ್ತವೆ!