Colossians 4:17 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅರ್ಖಿಪ್ಪನಿಗೆ, “ಪ್ರಭುವು ನಿನಗೆ ವಹಿಸಿರುವ ಸೇವೆಯನ್ನು ಖಂಡಿತವಾಗಿ ನೆರವೇರಿಸಬೇಕು” ಎಂದು ತಿಳಿಸಿರಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅರ್ಖಿಪ್ಪನಿಗೆ, “ನೀನು ಕರ್ತನಿಂದ ಹೊಂದಿರುವ ಸೇವೆಯನ್ನು ಎಚ್ಚರವಾಗಿದ್ದು ನೆರವೇರಿಸಬೇಕೆಂದು” ಹೇಳಿರಿ.
Kannada BSI Bible 2016
ಅರ್ಖಿಪ್ಪನಿಗೆ--ನೀನು ಕರ್ತನಿಂದ ಹೊಂದಿರುವ ಸೇವೆಯನ್ನು ನೆರವೇರಿಸುವದಕ್ಕೆ ಎಚ್ಚರವಾಗಿರಬೇಕೆಂದು ಹೇಳಿರಿ.ಇದು ಪೌಲನೆಂಬ ನಾನು ನನ್ನ ಕೈಯಿಂದ ಬರೆದ ವಂದನೆ. ನಾನು ಸೆರೆಯಲ್ಲಿದ್ದೇನೆಂಬದನ್ನು ಜ್ಞಾಪಕ ಮಾಡಿಕೊಳ್ಳಿರಿ. ಕೃಪೆಯು ನಿಮ್ಮೊಂದಿಗಿರಲಿ. ಆಮೆನ್‌.
Kannada BSI JV (ಕನ್ನಡ ಸತ್ಯವೇದವು J.V. (BSI))
ಅರ್ಖಿಪ್ಪನಿಗೆ - ನೀನು ಕರ್ತನಿಂದ ಹೊಂದಿರುವ ಸೇವೆಯನ್ನು ನೆರವೇರಿಸುವದಕ್ಕೆ ಎಚ್ಚರವಾಗಿರಬೇಕೆಂದು ಹೇಳಿರಿ.
Kannada Bible (KNCL) BSI 2016
ತನಗೆ ಒಪ್ಪಿಸಿದ ಕೆಲಸವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕೆಂಬುದಾಗಿ ಅರ್ಖಿಪ್ಪನಿಗೆ ತಿಳಿಸಿರಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅರ್ಖಿಪ್ಪನಿಗೆ, “ನೀನು ಕರ್ತ ಯೇಸುವಿನಿಂದ ಹೊಂದಿರುವ ಸೇವೆಯನ್ನು ನೆರವೇರಿಸುವುದಕ್ಕೆ ಎಚ್ಚರವಾಗಿರಬೇಕು!” ಎಂದು ಹೇಳಿರಿ.