Daniel 1:15 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಹತ್ತು ದಿನಗಳ ತರುವಾಯ ದಾನಿಯೇಲ ಮತ್ತು ಅವನ ಸ್ನೇಹಿತರು ಅರಸನ ಆಹಾರವನ್ನು ಊಟಮಾಡಿದ ಇತರ ಎಲ್ಲ ತರುಣರಿಗಿಂತ ಆರೋಗ್ಯವಂತರಾಗಿ ಕಾಣಿಸಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರು ಹತ್ತು ದಿನಗಳ ನಂತರ ರಾಜನ ಆಹಾರವನ್ನು ಉಣ್ಣುತ್ತಿದ್ದ ಸಕಲ ಯುವಕರಿಗಿಂತ ಸುಂದರರಾಗಿಯೂ, ಪುಷ್ಟರಾಗಿಯೂ ಕಾಣಿಸಿದರು.
Kannada BSI Bible 2016
ಹತ್ತು ದಿವಸಗಳ ಕೊನೆಯ ವರೆಗೂ ಅರಸನ ಭೋಜನದ ಪಾಲನ್ನು ತಿನ್ನುವ ಯೌವನಸ್ಥರೆ ಲ್ಲರಿಗಿಂತ ಇವರ ಮುಖಗಳು ನೋಡುವದಕ್ಕೆ ಸುಂದರ ವಾಗಿಯೂ ಶರೀರದಲ್ಲಿ ಪುಷ್ಟರಾಗಿಯೂ ಕಾಣಿಸಿದವು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರು ಹತ್ತು ದಿನಗಳ ಮೇಲೆ ರಾಜನ ಆಹಾರವನ್ನು ಉಣ್ಣುತ್ತಿದ್ದ ಸಕಲ ಯುವಕರಿಗಿಂತ ಸುಂದರರಾಗಿಯೂ ಪುಷ್ಟರಾಗಿಯೂ ಕಾಣಿಸಿದರು.
Kannada Bible (KNCL) BSI 2016
ಹತ್ತು ದಿನಗಳಾದ ಮೇಲೆ ರಾಜಭೋಜನ ಉಣ್ಣುತ್ತಿದ್ದ ಎಲ್ಲ ಯುವಕರಿಗಿಂತ ಇವರು ಸುಂದರವಾಗಿಯೂ ಪುಷ್ಟರಾಗಿಯೂ ಕಾಣಿಸಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಹತ್ತು ದಿವಸಗಳಾದ ಮೇಲೆ ಅರಸನ ಭೋಜನದ ಪಾಲನ್ನು ತಿನ್ನುವ ಯೌವನಸ್ಥರೆಲ್ಲರಿಗಿಂತ ಇವರು ಆರೋಗ್ಯಕರವಾಗಿಯೂ, ಶರೀರದಲ್ಲಿ ಪುಷ್ಟರಾಗಿಯೂ ಕಾಣಿಸಿದರು.