Daniel 1:18 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಎಲ್ಲ ತರುಣರು ಮೂರು ವರ್ಷ ತರಬೇತಿ ಪಡೆಯಬೇಕೆಂದು ಅರಸನು ಹೇಳಿದ್ದನು. ಆ ಅವಧಿ ಮುಗಿದ ಮೇಲೆ ಅಶ್ಪೆನಜನು ಆ ಎಲ್ಲ ತರುಣರನ್ನು ಅರಸನಾದ ನೆಬೂಕದ್ನೆಚ್ಚರನ ಸಮ್ಮುಖಕ್ಕೆ ಕರೆತಂದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ರಾಜನು ನೇಮಿಸಿದ ಕಾಲವು ಕಳೆದು ಯುವಕರನ್ನು ಸನ್ನಿಧಿಗೆ ತರತಕ್ಕ ಸಮಯವು ಬಂದಾಗ, ಕಂಚುಕಿಯರ ಅಧ್ಯಕ್ಷನು ಅವರನ್ನು ನೆಬೂಕದ್ನೆಚ್ಚರನ ಸಮ್ಮುಖಕ್ಕೆ ಕರೆದು ತಂದನು.
Kannada BSI Bible 2016
ಆಗ ಅರಸನು ಅವರನ್ನು ತರಬೇಕೆಂದು ಹೇಳಿದ್ದರಿಂದ ನೇಮಿಸಿದ ದಿವಸಗಳ ಕೊನೆಯಲ್ಲಿ ಕಂಚುಕಿಯರ ಯಜಮಾನನು ಅವರನ್ನು ನೆಬೂಕದ್ನೆಚ್ಚರನ ಮುಂದೆ ತಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ರಾಜನು ನೇವಿುಸಿದ ಕಾಲವು ಕಳೆದು ಯುವಕರನ್ನು ಸನ್ನಿಧಿಗೆ ತರತಕ್ಕ ಸಮಯವು ಬಂದಾಗ ಕಂಚುಕಿಯರ ಅಧ್ಯಕ್ಷನು ಅವರನ್ನು ನೆಬೂಕದ್ನೆಚ್ಚರನ ಸಮ್ಮುಖಕ್ಕೆ ಕರತಂದನು.
Kannada Bible (KNCL) BSI 2016
ರಾಜನು ನೇಮಿಸಿದ ಕಾಲವು ಕಳೆಯಿತು. ಆ ಯುವಕರನ್ನು ರಾಜಸನ್ನಿಧಿಗೆ ಕರೆದುತರುವ ಸಮಯವು ಬಂದಿತು. ಕಂಚುಕಿಯರ ನಾಯಕ ಅವರನ್ನು ನೆಬೂಕದ್ನೆಚ್ಚರನ ಸಮ್ಮುಖಕ್ಕೆ ಕರೆದುತಂದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅರಸನು ಅವರನ್ನು ಕರೆತರಬೇಕೆಂದು ನೇಮಿಸಿದ ದಿವಸಗಳ ಕೊನೆಯಲ್ಲಿ ಕಂಚುಕಿಯರ ಯಜಮಾನನು ಅವರನ್ನು ನೆಬೂಕದ್ನೆಚ್ಚರನ ಮುಂದೆ ತಂದನು.