Daniel 1:19 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ರಾಜನು ಅವರ ಸಂಗಡ ಮಾತಾಡಿದನು. ಅರಸನಿಗೆ ದಾನಿಯೇಲ, ಹನನ್ಯ, ಮೀಶಾಯೇಲ, ಅಜರ್ಯ ಇವರಷ್ಟು ಯೊಗ್ಯರಾದವರು ಆ ಸಮಸ್ತ ಯುವಕರಲ್ಲಿ ಮತ್ತಾರೂ ಕಂಡು ಬರಲಿಲ್ಲ. ಆದ್ದರಿಂದ ಆ ನಾಲ್ಕು ಜನ ಯುವಕರು ರಾಜನ ಸೇವಕರಾದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ರಾಜನು ಅವರ ಸಂಗಡ ಮಾತನಾಡುವಾಗ ಆ ಸಮಸ್ತ ಯುವಕರಲ್ಲಿ ದಾನಿಯೇಲ, ಹನನ್ಯ, ಮೀಶಾಯೇಲ, ಅಜರ್ಯ ಇವರ ಹಾಗೆ ಯಾರೂ ಕಂಡುಬರಲಿಲ್ಲ; ಆದಕಾರಣ ಅವರು ರಾಜನ ಸನ್ನಿಧಿಸೇವಕರಾದರು.
Kannada BSI Bible 2016
ಅರಸನು ಅವರ ಸಂಗಡ ಮಾತನಾಡಿದನು; ಅವರೆಲ್ಲರಲ್ಲಿ ದಾನಿ ಯೇಲ, ಹನನ್ಯ, ವಿಾಶಾಯೇಲ ಮತ್ತು ಅಜರ್ಯ ಇವರ ಹಾಗೆ ಒಬ್ಬನೂ ಸಿಗಲಿಲ್ಲ. ಆದದರಿಂದಲೇ ಇವರು ಅರಸನ ಸನ್ನಿಧಾನದಲ್ಲಿ ನಿಂತರು.
Kannada BSI JV (ಕನ್ನಡ ಸತ್ಯವೇದವು J.V. (BSI))
ರಾಜನು ಅವರ ಸಂಗಡ ಮಾತಾಡುವಾಗ ಆ ಸಮಸ್ತ ಯುವಕರಲ್ಲಿ ದಾನಿಯೇಲ, ಹನನ್ಯ, ಮೀಶಾಯೇಲ, ಅಜರ್ಯ, ಇವರ ಹಾಗೆ ಯಾರೂ ಕಂಡುಬರಲಿಲ್ಲ; ಆದಕಾರಣ ಅವರು ರಾಜನ ಸನ್ನಿಧಿಸೇವಕರಾದರು.
Kannada Bible (KNCL) BSI 2016
ರಾಜನು ಅವರ ಸಂಗಡ ಮಾತಾಡುವಾಗ ಅಲ್ಲಿದ್ದ ಯುವಕರಲ್ಲೆಲ್ಲ ದಾನಿಯೇಲನಿಗೆ, ಹನನ್ಯನಿಗೆ, ಮೀಶಾಯೇಲನಿಗೆ, ಅಜರ್ಯನಿಗೆ, ಸಮಾನರು ಯಾರೂ ಕಂಡುಬರಲಿಲ್ಲ. ಆದಕಾರಣ ಆ ನಾಲ್ವರು ಸನ್ನಿಧಿಸೇವಕರಾದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅರಸನು ಅವರ ಸಂಗಡ ಮಾತನಾಡಿದನು. ಅವರೆಲ್ಲರಲ್ಲಿ ದಾನಿಯೇಲ, ಹನನ್ಯ, ಮೀಶಾಯೇಲ್ ಮತ್ತು ಅಜರ್ಯ ಇವರ ಹಾಗೆ ಒಬ್ಬನೂ ಸಿಗಲಿಲ್ಲ. ಆದ್ದರಿಂದಲೇ ಇವರು ಅರಸನ ಸನ್ನಿಧಿಯ ಸೇವಕರಾದರು.