Daniel 11:10 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ಉತ್ತರದ ರಾಜನ ಮಗನು ಯುದ್ಧದ ಸಿದ್ಧತೆಯನ್ನುಲೆ ಅವನ ರಾಜ್ಯವು ಒಂರಾಜನು ಬಂದ ಮಾದ ಅರಸನು ಬರುವನು. ಅವನು ಹೆಚ್ಚಿನ ಸಾಮರ್ಥ್ಯದಿಂದ ಆಳುವನು. ಅವನು ತನ್ನ ಮ ಮಾಡುವನು. ಅವರಿಬ್ಬರೂ ಸೇರಿ ಒಂದು ದೊಡ್ಡ ಸೈನ್ಯವನ್ನು ಕೂಡಿಸುವರು. ಆ ಸೈನ್ಯವು ರಭಸದಿಂದ ಬಂದ ಪ್ರವಾಹದಂತೆ ದೇಶದಲ್ಲೆಲ್ಲ ಸಂಚರಿಸಿ ಯುದ್ಧ ಮಾಡುತ್ತಾ ದಕ್ಷಿಣ ರಾಜನ ದುರ್ಗದವರೆಗೆ ನುಗ್ಗುವದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ಮೇಲೆ ಅವನ ಮಕ್ಕಳು ಯುದ್ಧ ಸನ್ನಾಹ ಮಾಡಿ ಮಹಾವ್ಯೂಹವಾದ ದೊಡ್ಡ ಸೈನ್ಯವನ್ನು ಕೂಡಿಸುವರು. ಆ ಸೈನ್ಯವು ಮುಂದುವರೆದು ತುಂಬಿತುಳುಕಿ ಹಬ್ಬಿಕೊಳ್ಳುವುದು. ಅವರು ಪುನಃ ಯುದ್ಧಕ್ಕೆ ಹೊರಟು ದಕ್ಷಿಣ ದಿಕ್ಕಿನ ರಾಜನ ದುರ್ಗದವರೆಗೆ ನುಗ್ಗುವರು.
Kannada BSI Bible 2016
ಆಮೇಲೆ ಅವನ ಮಕ್ಕಳು ಸನ್ನದ್ಧರಾಗಿ ದೊಡ್ಡ ಸೈನ್ಯಗಳ ಸಮೂಹವನ್ನು ಕೂಡಿಸುವರು; ಅವರಲ್ಲಿ ಒಬ್ಬನು ನಿಶ್ಚಯವಾಗಿ ಬಂದು ಅದರಲ್ಲಿ ಪ್ರಳಯದಂತೆ ಹಾದುಹೋಗುವನು. ಅವನು ಮತ್ತೆ ಸನ್ನದ್ಧನಾಗಿ ಕೋಟೆಯನ್ನು ಮುತ್ತುವನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಮೇಲೆ ಅವನ ಮಕ್ಕಳು ಯುದ್ಧಸನ್ನಾಹಮಾಡಿ ವ್ಯೂಹವ್ಯೂಹವಾದ ದೊಡ್ಡ ಸೈನ್ಯವನ್ನು ಕೂಡಿಸುವರು; ಆ ಸೈನ್ಯವು ಮುಂದರಿದು ತುಂಬಿ ತುಳುಕಿ ಹಬ್ಬಿಕೊಳ್ಳುವದು; ಅವರು ಪುನಃ ಯುದ್ಧಕ್ಕೆ ಹೊರಟು ದಕ್ಷಿಣರಾಜನ ದುರ್ಗದವರೆಗೆ ನುಗ್ಗುವರು.
Kannada Bible (KNCL) BSI 2016
ಆಮೇಲೆ ಉತ್ತರರಾಜನ ಮಕ್ಕಳು ಯುದ್ಧಸನ್ನಾಹ ಮಾಡಿ ಮಹಾವ್ಯೂಹವಾದ ದೊಡ್ಡ ಸೈನ್ಯವನ್ನು ಕೂಡಿಸುವರು. ಆ ಸೈನ್ಯ ಬೆಳೆದು ತುಂಬಿತುಳುಕುವ ಪ್ರವಾಹದಂತೆ ಹಬ್ಬಿಕೊಳ್ಳುವುದು. ಅವರು ಮತ್ತೆ ಯುದ್ಧಕ್ಕೆ ಹೊರಟು ದಕ್ಷಿಣರಾಜನ ದುರ್ಗದವರೆಗೆ ನುಗ್ಗುವರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನ ಮಕ್ಕಳು ಯುದ್ಧಕ್ಕೆ ಸಿದ್ಧರಾಗಿ ದೊಡ್ಡ ಸೈನ್ಯ ಕೂಡಿಸುವರು. ಆ ಸೈನ್ಯವು ನಿಬಂಧಿಸಲಾಗದ ಪ್ರವಾಹದಂತೆ ಹರಿದುಬಂದು, ಯುದ್ಧವನ್ನು ಅವನ ಕೋಟೆಯವರೆಗೆ ನಡೆಸುವರು.