Daniel 11:17 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಉತ್ತರದ ರಾಜನು ತನ್ನ ಸರ್ವಶಕ್ತಿಯಿಂದ ದಕ್ಷಿಣದ ರಾಜನೊಂದಿಗೆ ಹೋರಾಡಲು ನಿರ್ಧರಿಸುವನು. ಅವನು ದಕ್ಷಿಣದ ರಾಜನೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಳ್ಳುವನು. ಉತ್ತರದ ರಾಜನು ತನ್ನ ಮಗಳನ್ನು ದಕ್ಷಿಣದ ರಾಜನಿಗೆ ಮದುವೆ ಮಾಡಿಕೊಡುವನು. ದಕ್ಷಿಣದ ರಾಜನನ್ನು ಸೋಲಿಸುವ ಉದ್ದೇಶದಿಂದ ಉತ್ತರದ ರಾಜನು ಹೀಗೆ ಮಾಡುವನು. ಆದರೆ ಅವನ ತಂತ್ರಗಳು ಯಶಸ್ವಿಯಾಗುವದಿಲ್ಲ. ಅವುಗಳಿಂದ ಅವನಿಗೆ ಸಹಾಯ ಸಿಕ್ಕುವದಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ದಕ್ಷಿಣ ದಿಕ್ಕಿನ ರಾಜನ ಮೇಲೆ ಬೀಳಬೇಕೆಂದು ನಿರ್ಧರಿಸಿ ತನ್ನ ರಾಜ್ಯದ ಸಮಸ್ತ ಬಲ ಸಮೇತನಾಗಿ ಹೊರಟು, ಅವನ ಸಂಗಡ ಒಪ್ಪಂದ ಮಾಡಿಕೊಳ್ಳುವನು. ಅವನ ರಾಜ್ಯದ ಹಾನಿಗಾಗಿ ಅವನಿಗೆ ಹೆಣ್ಣು ಮಗಳನ್ನು ಕೊಡುವನು. ಆದರೆ ಆ ಉಪಾಯವೂ ನಿಲ್ಲದು, ತನಗೆ ಅನುಕೂಲವಾಗುವುದಿಲ್ಲ.
Kannada BSI Bible 2016
ಅವನು ತನ್ನ ರಾಜ್ಯದ ಸಮಸ್ತ ಬಲ ಸಮೇತನಾಗಿ ಹೊರಟು ಅವನನ್ನು ಎದುರುಗೊಳ್ಳುವನು. ಪ್ರಮಾಣಿ ಕರು ಅವನೊಂದಿಗಿರುವರು; ಹೀಗೆ ಅವನು ಮಾಡು ವನು. ಮತ್ತು ಹೆಣ್ಣು ಮಗಳನ್ನು ಕೆಡಿಸುವದಕ್ಕೆ ಅವನಿಗೆ ಕೊಡುವನು. ಆದರೆ ಅವಳು ಅವನ ಕಡೆಗೆ ನಿಲ್ಲುವ ದಿಲ್ಲ, ಅವನಿಗಾಗಿ ಇರುವದಿಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ದಕ್ಷಿಣರಾಜನ ಮೇಲೆ ಬೀಳಬೇಕೆಂದು ನಿರ್ಧರಿಸಿ ತನ್ನ ರಾಜ್ಯದ ಸಮಸ್ತ ಬಲ ಸಮೇತನಾಗಿ ಹೊರಟು ಅವನ ಸಂಗಡ ಒಪ್ಪಂದಮಾಡಿಕೊಳ್ಳುವನು; ಅವನ ರಾಜ್ಯದ ಹಾನಿಗಾಗಿ ಅವನಿಗೆ ಹೆಣ್ಣುಮಗಳನ್ನು ಕೊಡುವನು; ಆದರೆ ಆ ಉಪಾಯವೂ ನಿಲ್ಲದು, ತನಗೆ ಅನುಕೂಲಿಸದು.
Kannada Bible (KNCL) BSI 2016
“ಉತ್ತರದ ರಾಜನು ದಕ್ಷಿಣರಾಜನ ಮೇಲೆ ಬೀಳಬೇಕೆಂದು ನಿರ್ಧರಿಸಿ ತನ್ನ ರಾಜ್ಯದ ಸಮಸ್ತ ಶಕ್ತಿಸಮೇತನಾಗಿ ಹೊರಟು ಅವನ ಸಂಗಡ ಒಪ್ಪಂದ ಮಾಡಿಕೊಳ್ಳುವನು. ಅವನ ರಾಜ್ಯದ ಹಾನಿಗಾಗಿಯೆ ಹೆಣ್ಣನ್ನು ಕೊಡುವನು. ಆದರೆ ಈ ಉಪಾಯ ಫಲಿಸದು. ಅದರಿಂದ ತನಗೂ ಅನುಕೂಲವಾಗದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನು ತನ್ನ ರಾಜ್ಯದ ಸಮಸ್ತ ಬಲ ಸಮೇತನಾಗಿ ಹೊರಟು, ದಕ್ಷಿಣದ ರಾಜನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವನು. ಅವನ ರಾಜ್ಯವನ್ನು ಉರುಳಿಸಲು ಅವನಿಗೆ ಮಗಳನ್ನು ಕೊಡುವನು. ಆದರೆ ಅವನ ಯೋಜನೆಗಳು ಜಯಹೊಂದುವುದಿಲ್ಲ. ಇಲ್ಲವೆ ಅವನಿಗೆ ಸಹಾಯ ಮಾಡುವುದಿಲ್ಲ.