Daniel 11:20 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ಉತ್ತರದ ರಾಜನ ತರುವಾಯ ಒಬ್ಬ ಹೊಸ ರಾಜನು ಬರುವನು. ಅವನು ಬಹು ವೈಭವಯುಕ್ತವಾದ ಜೀವನವನ್ನು ನಡೆಸಲಿಚ್ಛಿಸಿ ಅದಕ್ಕೆ ಬೇಕಾಗುವ ಹಣವನ್ನು ಸಂಗ್ರಹಿಸಲು ಒಬ್ಬ ತೆರಿಗೆ ಅಧಿಕಾರಿಯನ್ನು ಕಳುಹಿಸುವನು. ಆದರೆ ಕೆಲವು ವರ್ಷಗಳಲ್ಲಿ ಆ ರಾಜನು ನಾಶವಾಗುವನು. ಆದರೆ ಅವನು ಯುದ್ಧದಲ್ಲಿ ಮಡಿಯುವದಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವನ ಸ್ಥಾನದಲ್ಲಿ ಮತ್ತೊಬ್ಬನು ಎದ್ದು, ರಾಜ್ಯದಲ್ಲಿ ಶಿರೋಮಣಿಯಾದ ದೇಶವನ್ನೆಲ್ಲ ದೋಚಿಕೊಳ್ಳತಕ್ಕವನನ್ನು ನೇಮಿಸುವನು. ಅವನು ಕೆಲವು ದಿನಗಳೊಳಗೆ ನಾಶವಾಗುವನು. ಅವನ ನಾಶ ಕೋಪದ ಪೆಟ್ಟಿನಿಂದಲ್ಲ, ಯುದ್ಧದಿಂದಲೂ ಅಲ್ಲ.
Kannada BSI Bible 2016
ಆಗ ಅವನಿಗೆ ಬದಲಾಗಿ ರಮ್ಯವಾದ ರಾಜ್ಯದಲ್ಲಿ ಗುತ್ತಿಗೆಯನ್ನು ಹೆಚ್ಚಿಸುವನು, ತನ್ನ ಸ್ಥಾನದಲ್ಲಿ ನಿಲ್ಲು ವನು ಮತ್ತು ಅವನು ಕೆಲವು ದಿನಗಳೊಳಗೆ ನಾಶ ವಾಗುವನು; ಆದರೆ ಕೋಪದ ಪೆಟ್ಟಿನಿಂದಲ್ಲ, ಯುದ್ಧ ದಿಂದಲೂ ಅಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನ ಸ್ಥಾನದಲ್ಲಿ ಮತ್ತೊಬ್ಬನು ಎದ್ದು ರಾಜ್ಯದಲ್ಲಿ ಶಿರೋಮಣಿಯಾದ ದೇಶವನ್ನೆಲ್ಲ ದೋಚಿಕೊಳ್ಳತಕ್ಕವನನ್ನು ನೇವಿುಸುವನು; ಆಹಾ, ಕೆಲವು ದಿನಗಳೊಳಗೆ ನಾಶವಾಗುವನು; ಆದರೆ ಕೋಪದ ಪೆಟ್ಟಿನಿಂದಲ್ಲ, ಯುದ್ಧದಿಂದಲೂ ಅಲ್ಲ.
Kannada Bible (KNCL) BSI 2016
“ಅವನ ಸ್ಥಾನದಲ್ಲಿ ಮತ್ತೊಬ್ಬನು ರಾಜ್ಯವಾಳುವನು. ಇವನು ರಾಜ್ಯದಲ್ಲಿನ ಶಿರೋಮಣಿಯಂಥ ನಾಡನ್ನೆಲ್ಲ ದೋಚಿಕೊಳ್ಳಬಲ್ಲ ಉದ್ಯೋಗಿಯನ್ನು ನೇಮಿಸುವನು. ಆದರೆ ಕೆಲವೇ ದಿನಗಳಲ್ಲಿ ಅವನು ಕದನದಿಂದ ಅಲ್ಲ, ಕೋಪದಿಂದ ಅಲ್ಲ, ಹಾಗೆಯೇ ಮಡಿದುಹೋಗುವನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನ ಉತ್ತರಾಧಿಕಾರಿಯು ಅರಸೊತ್ತಿಗೆಯ ಸೊಗಸನ್ನು ಕಾದುಕೊಳ್ಳುವುದಕ್ಕಾಗಿ ಸುಂಕ ವಸೂಲಿ ಮಾಡುವವನನ್ನು ಕಳುಹಿಸುವನು. ಆದರೂ ಕೆಲವೇ ವರ್ಷಗಳಲ್ಲಿ ಅವನು ನಾಶ ಹೊಂದುವನು. ಇದು ಕೋಪದಿಂದಾಗಲಿ ಇಲ್ಲವೆ ಯುದ್ಧದಿಂದಾಗಲಿ ಆಗುವುದಿಲ್ಲ.