Daniel 11:24 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ಶ್ರೀಮಂತ ದೇಶಗಳು ನೆಮ್ಮದಿಯಿಂದಿರುವಾಗ ಈ ಕ್ರೂರಿಯು ಪೂರ್ವ ಸೂಚನೆಯಿಲ್ಲದೆ ಅವುಗಳ ಮೇಲೆ ದಾಳಿ ಮಾಡುವನು. ಅವನು ಸರಿಯಾದ ಸಮಯಕ್ಕೆ ದಾಳಿಮಾಡುವನು; ಅವನ ಪೂರ್ವಿಕರು ವಿಫಲರಾದ ದೇಶಗಳಲ್ಲಿ ಜಯ ಸಂಪಾದಿಸುವನು. ಅವನು ಸೋಲಿಸಿದ ದೇಶಗಳನ್ನು ಕೊಳ್ಳೆಹೊಡೆದು ದೊರೆತ ಸಂಪತ್ತನ್ನು ತನ್ನ ಅನುಯಾಯಿಗಳಲ್ಲಿ ಹಂಚುವನು. ಅವನು ಭದ್ರವಾದ ನಗರಗಳನ್ನು ಹಿಡಿದುಕೊಳ್ಳಲು ಮತ್ತು ನಾಶಮಾಡಲು ಯೋಜನೆಗಳನ್ನು ಮಾಡುವನು. ಅವನಿಗೆ ಜಯಸಿಕ್ಕಿದರೂ ಅದು ಸ್ವಲ್ಪ ಕಾಲದವರೆಗೆ ಮಾತ್ರ ಇರುತ್ತದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೆಮ್ಮದಿಯ ಕಾಲದಲ್ಲಿ ಸಂಸ್ಥಾನದ ಫಲವತ್ತಾದ ಪ್ರದೇಶಗಳ ಮೇಲೆ ನುಗ್ಗುವನು. ತಂದೆ, ತಾತಂದಿರು ಮಾಡದ ಕಾರ್ಯಗಳನ್ನು ಮಾಡುವನು, ಸೂರೆ, ಸುಲಿಗೆ, ಕೊಳ್ಳೆ ಹೊಡೆದವುಗಳನ್ನು ತನ್ನವರಿಗೆ ಚೆಲ್ಲಿಬಿಡುವನು. ಕೋಟೆಗಳನ್ನು ಹಿಡಿಯುವ ಕುತಂತ್ರಗಳನ್ನು ಕೊನೆಯವರೆಗೂ ಮುಂದುವರೆಸುವನು.
Kannada BSI Bible 2016
ನೆಮ್ಮದಿಯಿಂದ ಸಂಸ್ಥಾನದ ಫಲವತ್ತಾದ ಪ್ರದೇಶ ಗಳಲ್ಲಿ ನುಗ್ಗಿ ತಂದೆ ತಾತಂದಿರು ಮಾಡದ ಕಾರ್ಯ ಗಳನ್ನು ಮಾಡುವನು; ಸೂರೆ, ಸುಲಿಗೆ, ಕೊಳ್ಳೆಹೊಡೆ ದವುಗಳನ್ನು ಅವರಲ್ಲಿ ಚೆಲ್ಲಿಬಿಡುವನು. ಹೌದು, ಕೋಟೆಗಳನ್ನು ಹಿಡಿಯುವ ಕುತಂತ್ರಗಳನ್ನು ಕ್ಲುಪ್ತ ಕಾಲದ ತನಕ ಕಲ್ಪಿಸುತ್ತಿರುವನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನೆಮ್ಮದಿಯ ಕಾಲದಲ್ಲಿ ಸಂಸ್ಥಾನದ ಫಲವತ್ತಾದ ಪ್ರದೇಶಗಳ ಮೇಲೆ ನುಗ್ಗುವನು; ತಂದೆತಾತಂದಿರು ಮಾಡದ ಕಾರ್ಯಗಳನ್ನು ಮಾಡುವನು; ಸೂರೆಸುಲಿಗೆ ಕೊಳ್ಳೆಹೊಡೆದವುಗಳನ್ನು ತನ್ನವರಿಗೆ ಚೆಲ್ಲಿಬಿಡುವನು; ಕೋಟೆಗಳನ್ನು ಹಿಡಿಯುವ ಕುತಂತ್ರಗಳನ್ನು ಕ್ಲುಪ್ತಕಾಲದ ತನಕ ಕಲ್ಪಿಸುತ್ತಿರುವನು.
Kannada Bible (KNCL) BSI 2016
ನೆಮ್ಮದಿಯ ಕಾಲದಲ್ಲಿ ಸಂಸ್ಥಾನದ ಫಲವತ್ತಾದ ಪ್ರದೇಶಗಳ ಮೇಲೆ ದಾಳಿಮಾಡುವನು. ತಂದೆತಾತಂದಿರು ಮಾಡದಂಥ ಕಾರ್ಯಗಳನ್ನು ಮಾಡುವನು. ಸೂರೆ-ಸುಲಿಗೆ-ಕೊಳ್ಳೆಹೊಡೆದವುಗಳನ್ನು ತನ್ನವರಿಗೆ ಚೆಲ್ಲಿಬಿಡುವನು. ಕೋಟೆಗಳನ್ನು ಹಿಡಿಯುವ ಕುತಂತ್ರಗಳನ್ನು ಕೊನೆಯವರೆಗೂ ಮುಂದುವರೆಸುವನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನೆಮ್ಮದಿಯ ಕಾಲದಲ್ಲಿ ಸಂಸ್ಥಾನಗಳ ಫಲವತ್ತಾದ ಪ್ರದೇಶಗಳಲ್ಲಿ ನುಗ್ಗಿ, ತಂದೆ ತಾತಂದಿರು ಮಾಡದ ಕಾರ್ಯಗಳನ್ನು ಮಾಡುವನು. ಸೂರೆ, ಸುಲಿಗೆ, ಕೊಳ್ಳೆ ಹೊಡೆದವುಗಳನ್ನು, ತನ್ನನ್ನು ಅವರಿಗೆ ಹಂಚುವನು. ಕೋಟೆಗಳನ್ನು ಹಿಡಿಯುವ ಕುತಂತ್ರಗಳನ್ನು ಕ್ಲುಪ್ತಕಾಲದ ತನಕ ಕಲ್ಪಿಸುತ್ತಿರುವನು.