Daniel 11:35 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಜ್ಞಾನಿಗಳಾದ ಕೆಲವು ಯೆಹೂದ್ಯರು ತಪ್ಪುಗಳನ್ನು ಮಾಡಿ ಬಿದ್ದುಹೋಗುವರು. ಆದರೆ ಹಿಂಸೆ ನಡೆಯಬೇಕು. ಏಕೆಂದರೆ ಅಂತ್ಯಕಾಲ ಬರುವವರೆಗೆ ಅವರು ದೃಢಚಿತ್ತರೂ ಶುದ್ಧರೂ ನಿಷ್ಕಳಂಕರೂ ಆಗಬೇಕು. ಸರಿಯಾದ ಸಮಯಕ್ಕೆ ಅಂತ್ಯಕಾಲ ಬರುವದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಜ್ಞಾನಿಗಳಲ್ಲಿಯೂ ಕೆಲವರು ಅಂತ್ಯಕಾಲದವರೆಗೆ ಬೀಳುತ್ತಿರುವರು. ಆದುದರಿಂದ ಜನರು ಶೋಧಿಸಲ್ಪಟ್ಟು, ಶುದ್ಧಿಹೊಂದಿ ಶುಭ್ರರಾಗುವರು. ಅಂತ್ಯವು ನಿಶ್ಚಿತಕಾಲದಲ್ಲೇ ಆಗುವುದು.
Kannada BSI Bible 2016
ಇದಲ್ಲದೆ ಅಂತ್ಯಕಾಲದ ವರೆಗೆ ಅವರನ್ನು ಶೋಧಿಸುವದಕ್ಕೂ ಶುದ್ಧಮಾಡುವದಕ್ಕೂ ಶುಭ್ರ ಪಡಿಸುವದಕ್ಕೂ ವಿವೇಕಿಗಳಲ್ಲಿ ಕೆಲವರು ಬೀಳುವರು; ಇದು (ಅಂತ್ಯವು) ನಿಯಮಿತ ಕಾಲಕ್ಕೆ ಇರುವದು;
Kannada BSI JV (ಕನ್ನಡ ಸತ್ಯವೇದವು J.V. (BSI))
ಜ್ಞಾನಿಗಳಲ್ಲಿಯೂ ಕೆಲವರು ಅಂತ್ಯಕಾಲದವರೆಗೆ ಬೀಳುತ್ತಿರುವರು; ಅದರಿಂದ ಜನರು ಶೋಧಿಸಲ್ಪಟ್ಟು ಶುದ್ಧಹೊಂದಿ ಶುಭ್ರರಾಗುವರು; ಅಂತ್ಯವು ಕ್ಲುಪ್ತಕಾಲದಲ್ಲೇ ಆಗುವದು.
Kannada Bible (KNCL) BSI 2016
ಅಂತ್ಯಕಾಲದವರೆಗೆ ಬುದ್ಧಿವಂತ ನಾಯಕರಲ್ಲಿ ಕೆಲವರು ಸಾವಿಗೆ ತುತ್ತಾಗುವರು. ಇದರಿಂದ ಜನರು ಶೋಧಿಸಲ್ಪಟ್ಟು, ಶುದ್ಧಿಹೊಂದಿ ಶುಭ್ರರಾಗುವರು. ಅಂತ್ಯವು ಕ್ಲುಪ್ತಕಾಲದಲ್ಲೇ ಬರುವುದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದಲ್ಲದೆ ಅಂತ್ಯಕಾಲದವರೆಗೆ ಜ್ಞಾನಿಗಳನ್ನು ಶೋಧಿಸುವುದಕ್ಕೂ ಅದರಲ್ಲಿ ಅನೇಕರು ಬೀಳುವರು; ಏಕೆಂದರೆ ಇದು ನೇಮಕವಾದ ಸಮಯದಲ್ಲಿ ಬರುವುದು.