Daniel 11:38 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಉತ್ತರದ ರಾಜನು ಯಾವ ದೇವರನ್ನೂ ಪೂಜಿಸನು, ಅವನು ಅಧಿಕಾರವನ್ನು ಪೂಜಿಸುವನು. ಅಧಿಕಾರ ಮತ್ತು ಶಕ್ತಿ ಇವುಗಳು ಅವನ ದೇವರು, ಅವನ ಪೂರ್ವಿಕರು ಅವನಷ್ಟು ಅಧಿಕಾರ ಪ್ರಿಯರಾಗಿರಲಿಲ್ಲ. ಅಧಿಕಾರ ದೇವತೆಯನ್ನು ಅವನು ಬೆಳ್ಳಿಬಂಗಾರಗಳಿಂದ, ಅಮೂಲ್ಯವಾದ ರತ್ನಾಭರಣಗಳಿಂದ ಮತ್ತು ಬೇರೆ ಕಾಣಿಕೆಗಳಿಂದ ಸೇವಿಸುವನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕುಲದೇವರಿಗೆ ಬದಲಾಗಿ ದುರ್ಗಾಭಿಮಾನಿ ದೇವರನ್ನು ಘನಪಡಿಸುವನು; ಪೂರ್ವಿಕರಿಗೆ ತಿಳಿಯದ ದೇವರನ್ನು ಬೆಳ್ಳಿಬಂಗಾರದಿಂದಲೂ, ರತ್ನಗಳಿಂದಲೂ, ಅಮೂಲ್ಯ ವಸ್ತುಗಳಿಂದಲೂ ಸೇವಿಸುವನು.
Kannada BSI Bible 2016
ಆದರೆ ಅವನು ತನ್ನ ಸ್ಥಾನದಲ್ಲಿ ದೇವರ ಶಕ್ತಿಗಳನ್ನು ಮತ್ತು ತನ್ನ ಪಿತೃಗಳು ಅರಿಯದ ದೇವರುಗಳನ್ನು ಗೌರವಿಸುವನು; ಬಂಗಾರ ದಿಂದಲೂ ಬೆಳ್ಳಿಯಿಂದಲೂ ಅಮೂಲ್ಯ ಕಲ್ಲುಗಳಿಂ ದಲೂ ರಮ್ಯವಾದವುಗಳಿಂದಲೂ ಗೌರವಿಸುವನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಕುಲದೇವರಿಗೆ ಬದಲಾಗಿ ದುರ್ಗಾಭಿಮಾನಿ ದೇವರನ್ನು ಘನಪಡಿಸುವನು; ಪಿತೃಗಳಿಗೆ ತಿಳಿಯದ ದೇವರನ್ನು ಬೆಳ್ಳಿಬಂಗಾರದಿಂದಲೂ ರತ್ನಗಳಿಂದಲೂ ಅಮೂಲ್ಯವಸ್ತುಗಳಿಂದಲೂ ಸೇವಿಸುವನು.
Kannada Bible (KNCL) BSI 2016
ಕುಲದೇವರಿಗೆ ಬದಲಾಗಿ ದುರ್ಗ ದೇವರನ್ನು ಘನಪಡಿಸುವನು. ಪೂರ್ವಜರಿಗೆ ತಿಳಿಯದ ದೇವರನ್ನು ಬೆಳ್ಳಿಬಂಗಾರದಿಂದಲೂ ರತ್ನಗಳಿಂದಲೂ ಅಮೂಲ್ಯ ಕೊಡುಗೆಗಳಿಂದಲೂ ಗೌರವಿಸುವನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನು ಕುಲ ದೇವರಿಗೆ ಬದಲಾಗಿ, ದುರ್ಗ ದೇವರನ್ನು ಘನಪಡಿಸುವನು. ಪೂರ್ವಜರಿಗೆ ತಿಳಿಯದ ದೇವರನ್ನು ಬೆಳ್ಳಿ ಬಂಗಾರದಿಂದಲೂ, ರತ್ನಗಳಿಂದಲೂ, ಅಮೂಲ್ಯ ಕೊಡುಗೆಗಳಿಂದಲೂ ಗೌರವಿಸುವನು.