Daniel 11:43 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅವನು ಬೆಳ್ಳಿಬಂಗಾರಗಳ ನಿಧಿನಿಕ್ಷೇಪಗಳನ್ನು ಮತ್ತು ಈಜಿಪ್ಟಿನ ಒಳ್ಳೊಳ್ಳೆಯ ಸಮಸ್ತ ವಸ್ತುಗಳನ್ನು ವಶಪಡಿಸಿಕೊಳ್ಳುವನು. ಲೂಬ್ಯರು ಮತ್ತು ಕೂಷ್ಯರು ಅವನ ಸ್ವಾಮ್ಯವನ್ನು ಒಪ್ಪಿಕೊಳ್ಳುವರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವನು ಬೆಳ್ಳಿ ಬಂಗಾರಗಳ ನಿಧಿನಿಕ್ಷೇಪಗಳನ್ನೂ, ಐಗುಪ್ತದ ಒಳ್ಳೊಳ್ಳೆಯ ಸಮಸ್ತ ವಸ್ತುಗಳನ್ನೂ ವಶಮಾಡಿಕೊಳ್ಳುವನು. ಲೂಬ್ಯರೂ, ಕೂಷ್ಯರೂ ಅವನನ್ನು ಹಿಂಬಾಲಿಸಿ ಹೋಗುವರು.
Kannada BSI Bible 2016
ಬಂಗಾರ ಬೆಳ್ಳಿ ಬೊಕ್ಕಸಗಳ ಮೇಲೆಯೂ ಐಗುಪ್ತದ ಎಲ್ಲಾ ಅಮೂಲ್ಯವಸ್ತುಗಳ ಮೇಲೆಯೂ ಅವನಿಗೆ ಅಧಿಕಾರವಿರುವದು. ಲೂಬ್ಯರೂ ಐಥೋ ಪ್ಯರೂ ಅವನನ್ನು ಹಿಂಬಾಲಿಸುವರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನು ಬೆಳ್ಳಿಬಂಗಾರಗಳ ನಿಧಿನಿಕ್ಷೇಪಗಳನ್ನೂ ಐಗುಪ್ತದ ಒಳ್ಳೊಳ್ಳೆಯ ಸಮಸ್ತ ವಸ್ತುಗಳನ್ನೂ ವಶಮಾಡಿಕೊಳ್ಳುವನು; ಲೂಬ್ಯರೂ ಕೂಷ್ಯರೂ ಅವನನ್ನು ಹಿಂಬಾಲಿಸಿ ಹೋಗುವರು.
Kannada Bible (KNCL) BSI 2016
ಬೆಳ್ಳಿಬಂಗಾರಗಳ ನಿಧಿನಿಕ್ಷೇಪಗಳನ್ನು ಹಾಗು ಈಜಿಪ್ಟಿನ ಒಳ್ಳೊಳ್ಳೆಯ ವಸ್ತುಗಳೆಲ್ಲವನ್ನು ವಶಮಾಡಿಕೊಳ್ಳುವನು. ಲಿಬ್ಯ ಮತ್ತು ಸುಡಾನಿನವರು ಅವನನ್ನು ಹಿಂಬಾಲಿಸುವರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಬಂಗಾರ ಬೆಳ್ಳಿ ಬೊಕ್ಕಸಗಳ ಮೇಲೆಯೂ, ಈಜಿಪ್ಟಿನ ಎಲ್ಲಾ ಅಮೂಲ್ಯ ವಸ್ತುಗಳ ಮೇಲೆಯೂ ಅವನಿಗೆ ಅಧಿಕಾರವಿರುವುದು. ಲಿಬಿಯದವರೂ ಕೂಷ್ಯರೂ ಅವನಿಗೆ ಅಧೀನರಾಗುವರು.