Daniel 11:45 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಸಮುದ್ರಕ್ಕೂ ಸುಂದರವಾದ ಪರಿಶುದ್ಧ ಪರ್ವತಕ್ಕೂ ನಡುವೆ, ಅರಮನೆಯಂತಹ ತನ್ನ ಗುಡಾರಗಳನ್ನು ಹಾಕಿಸುವನು. ಕೊನೆಗೆ ಆ ಕೆಟ್ಟ ಅರಸನು ಸತ್ತುಹೋಗುವನು. ಅವನ ಅಂತ್ಯಕಾಲದ ಹೊತ್ತಿಗೆ ಅವನಿಗೆ ಸಹಾಯ ಮಾಡಲು ಯಾರೂ ಇರುವುದಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಸಮುದ್ರಕ್ಕೂ, ಅಂದ ಚಂದದ ಪರಿಶುದ್ಧ ಪರ್ವತಕ್ಕೂ ನಡುವೆ ಅರಮನೆಯಂಥ ತನ್ನ ಗುಡಾರಗಳನ್ನು ಹಾಕಿಸುವನು. ಆಹಾ, ಅವನು ಕೊನೆಗಾಣುವನು, ಯಾರೂ ಅವನಿಗೆ ಸಹಾಯ ಮಾಡರು.”
Kannada BSI Bible 2016
ಅವನು ತನ್ನ ಅರಮನೆಯ ಗುಡಾರಗಳನ್ನು ಸಮು ದ್ರದ ನಡುವೆ ರಮ್ಯವಾದ ಪರಿಶುದ್ಧ ಪರ್ವತದಲ್ಲಿ ಹಾಕುವನು; ಆದರೂ ಅವನು ಕೊನೆಗಾಣುವನು. ಯಾರೂ ಅವನಿಗೆ ಸಹಾಯ ಮಾಡರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಸಮುದ್ರಕ್ಕೂ ಅಂದಚಂದದ ಪರಿಶುದ್ಧಪರ್ವತಕ್ಕೂ ನಡುವೆ ಅರಮನೆಯಂಥ ತನ್ನ ಗುಡಾರಗಳನ್ನು ಹಾಕಿಸುವನು; ಆಹಾ, ಅವನು ಕೊನೆಗಾಣುವನು, ಯಾರೂ ಅವನಿಗೆ ಸಹಾಯಮಾಡರು.
Kannada Bible (KNCL) BSI 2016
ಕಡಲಿಗೂ ಚೆಲುವಿನ ಪರಿಶುದ್ಧ ಪರ್ವತಕ್ಕೂ ನಡುವೆ ಅರಮನೆಯಂಥ ಗುಡಾರವನ್ನು ಹಾಕಿಸುವನು. ಆದರೂ ಸಹಾಯಕ್ಕೆ ಯಾರೂ ಇಲ್ಲದವನಾಗಿ ಸಾಯುವನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನು ತನ್ನ ರಾಜ ಗುಡಾರಗಳನ್ನು ಸಮುದ್ರದ ನಡುವೆ ರಮ್ಯವಾದ ಪರಿಶುದ್ಧ ಪರ್ವತದಲ್ಲಿ ಹಾಕುವನು. ಆದರೂ ಅವನು ಕೊನೆಗಾಣುವನು. ಯಾರೂ ಅವನಿಗೆ ಸಹಾಯ ಮಾಡರು.