Daniel 2:13 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅರಸನಾದ ನೆಬೂಕದ್ನೆಚ್ಚರನ ಆಜ್ಞೆಯನ್ನು ಪ್ರಕಟಗೊಳಿಸಲಾಯಿತು. ಎಲ್ಲಾ ವಿದ್ವಾಂಸರನ್ನು ಕೊಲ್ಲಬೇಕಾಗಿತ್ತು. ದಾನಿಯೇಲ ಮತ್ತು ಅವನ ಸ್ನೇಹಿತರನ್ನು ಹುಡುಕಿ ಅವರ ಕೊಲೆ ಮಾಡುವುದಕ್ಕಾಗಿ ರಾಜಭಟರನ್ನು ಕಳುಹಿಸಲಾಯಿತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕೂಡಲೆ ಆ ಆಜ್ಞೆಯು ಪ್ರಕಟವಾಯಿತು. ವಿದ್ವಾಂಸರು ಪ್ರಾಣಾಪಾಯಕ್ಕೆ ಗುರಿಯಾದರು; ದಾನಿಯೇಲನನ್ನೂ, ಅವನ ಸ್ನೇಹಿತರನ್ನೂ ಕೊಲ್ಲುವುದಕ್ಕೆ ಹುಡುಕಿದರು.
Kannada BSI Bible 2016
ಹಾಗೆಯೇ, ಜ್ಞಾನಿಗಳನ್ನು ಕೊಲ್ಲಬೇಕೆಂಬ ನಿರ್ಣಯವು ಹೊರಟಿತು; ಆಗ ದಾನಿಯೇಲನನ್ನೂ ಅವನ ಜೊತೆಗಾರರನ್ನೂ ಕೊಲ್ಲಲು ಹುಡುಕಿದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಕೂಡಲೆ ಆ ಆಜ್ಞೆಯು ಹೊರಪಟ್ಟಿತು; ವಿದ್ವಾಂಸರು ಪ್ರಾಣಾಪಾಯಕ್ಕೆ ಗುರಿಯಾದರು; ದಾನಿಯೇಲನನ್ನೂ ಅವನ ಸ್ನೇಹಿತರನ್ನೂ ಕೊಲ್ಲಲಿಕ್ಕೆ ಹುಡುಕಿದರು.
Kannada Bible (KNCL) BSI 2016
ಕೂಡಲೆ ಆ ಆಜ್ಞೆ ಹೊರಪಟ್ಟಿತು. ವಿದ್ವಾಂಸರು ಪ್ರಾಣಾಪಾಯಕ್ಕೆ ಗುರಿಯಾದರು. ಅಂತೆಯೇ ದಾನಿಯೇಲನನ್ನೂ ಅವನ ಗೆಳೆಯರೆಲ್ಲರನ್ನೂ ಕೊಲ್ಲಲಿಕ್ಕೆ ಹುಡುಕಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಹಾಗೆಯೇ ಜ್ಞಾನಿಗಳನ್ನು ಕೊಲ್ಲಬೇಕೆಂಬ ನಿರ್ಣಯವು ಹೊರಟಿತು. ದಾನಿಯೇಲನನ್ನೂ, ಅವನ ಜೊತೆಗಾರರನ್ನೂ ಕೊಲ್ಲಲು ಹುಡುಕಿದರು.