Daniel 2:14 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅರ್ಯೋಕನು ಅರಸನ ಮೈಗಾವಲಿನವರ ದಳವಾಯಿಯಾಗಿದ್ದನು. ಅವನು ಬಾಬಿಲೋನಿನ ವಿದ್ವಾಂಸರನ್ನು ಕೊಲ್ಲಲು ಹೊರಟಿದ್ದನು. ಆದರೆ ದಾನಿಯೇಲನು ಅವನೊಂದಿಗೆ ಮಾತನಾಡಿದನು. ದಾನಿಯೇಲನು ಅವನ ಸಂಗಡ ವಿವೇಕ ಮತ್ತು ನಮ್ರತೆಯಿಂದ ಮಾತನಾಡಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ರಾಜನ ಮೈಗಾವಲಿನವರ ದಳವಾಯಿಯಾದ ಅರ್ಯೋಕನು ಬಾಬೆಲಿನ ವಿದ್ವಾಂಸರ ಸಂಹಾರಕ್ಕೆ ಹೊರಟಾಗ, ದಾನಿಯೇಲನು ಬುದ್ಧಿವಿವೇಕಗಳಿಂದ ಅವನ ಸಂಗಡ ಮಾತನಾಡಿ,
Kannada BSI Bible 2016
ಆ ಮೇಲೆ ಬಾಬೆಲಿನ ಜ್ಞಾನಿಗಳನ್ನು ಕೊಲ್ಲಲ್ಲು ಹೊರಟಿದ್ದ ಅರಸನ ಕಾವಲುಗಾರರ ಅಧಿಪತಿಯಾದ ಅರ್ಯೋಕನಿಗೆ ದಾನಿಯೇಲನು ಆಲೋಚನೆ ಯಿಂದಲೂ ಜ್ಞಾನದಿಂದಲೂ ಉತ್ತರಕೊಟ್ಟನು;
Kannada BSI JV (ಕನ್ನಡ ಸತ್ಯವೇದವು J.V. (BSI))
ರಾಜನ ಮೈಗಾವಲಿನವರ ದಳವಾಯಿಯಾದ ಅರ್ಯೋಕನು ಬಾಬೆಲಿನ ವಿದ್ವಾಂಸರ ಸಂಹಾರಕ್ಕೆ ಹೊರಟಾಗ ದಾನಿಯೇಲನು ಬುದ್ಧಿವಿವೇಕಗಳಿಂದ ಅವನ ಸಂಗಡ ಮಾತಾಡಿ -
Kannada Bible (KNCL) BSI 2016
ರಾಜನ ಮೈಗಾವಲಿನವರ ದಳವಾಯಿಯಾದ ಅರ್ಯೋಕನು ಬಾಬಿಲೋನಿನ ವಿದ್ವಾಂಸರ ಸಂಹಾರಕ್ಕಾಗಿ ಹೊರಟಾಗ ದಾನಿಯೇಲನು ಬುದ್ಧಿವಿವೇಕಗಳಿಂದ ಅವನ ಸಂಗಡ ಮಾತಾಡಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಬಾಬಿಲೋನಿನ ಜ್ಞಾನಿಗಳನ್ನು ಕೊಲ್ಲಲು ಹೊರಟಿದ್ದ ಅರಸನ ಕಾವಲುಗಾರರ ಅಧಿಪತಿಯಾದ ಅರ್ಯೋಕನಿಗೆ ದಾನಿಯೇಲನು ಜ್ಞಾನದಿಂದಲೂ ಚಾತುರ್ಯದಿಂದಲೂ ಉತ್ತರಕೊಟ್ಟನು.