Daniel 2:15 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ದಾನಿಯೇಲನು ಅರ್ಯೋಕನಿಗೆ, “ಅರಸನು ಅಂತಹ ಕಠಿಣ ಶಿಕ್ಷೆಯನ್ನು ಏಕೆ ಆಜ್ಞಾಪಿಸಿದನು?” ಎಂದು ಕೇಳಿದನು. ಆಗ ಅರ್ಯೋಕನು ಅರಸನ ಕನಸಿಗೆ ಸಂಬಂಧಿಸಿದ ಎಲ್ಲಾ ವಿಷಯವನ್ನು ವಿವರಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ಈ ರಾಜಾಜ್ಞೆಯು ಏಕೆ ಇಷ್ಟು ಉಗ್ರವಾಗಿದೆ?” ಎಂದು ಕೇಳಲು ಅರ್ಯೋಕನು ನಡೆದ ಸಂಗತಿಯನ್ನು ದಾನಿಯೇಲನಿಗೆ ತಿಳಿಸಿದನು.
Kannada BSI Bible 2016
ಆಗ ದಾನಿಯೇಲನು ಅರಸನ ಅಧಿಪತಿಯಾದ ಅರ್ಯೋಕ ನಿಗೆ ಪ್ರತ್ಯುತ್ತರವಾಗಿ--ಅರಸನಿಂದ ಈ ನಿರ್ಣಯವು ಇಷ್ಟು ತೀಕ್ಷ್ಣವಾದದ್ದೇನು ಎಂದು ಕೇಳಲು ಅರ್ಯೋ ಕನು ದಾನಿಯೇಲನಿಗೆ ಆ ಸಂಗತಿಯ ವಿಷಯ ವಿವರಿ ಸಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಈ ರಾಜಾಜ್ಞೆಯು ಏಕೆ ಇಷ್ಟು ತೀಕ್ಷ್ಣ ಎಂದು ಕೇಳಲು ಅರ್ಯೋಕನು ನಡೆದ ಸಂಗತಿಯನ್ನು ದಾನಿಯೇಲನಿಗೆ ತಿಳಿಸಿದನು.
Kannada Bible (KNCL) BSI 2016
“ಈ ರಾಜಾಜ್ಞೆಯೇಕೆ ಇಷ್ಟು ತೀಕ್ಷ್ಣ?” ಎಂದು ಕೇಳಿದನು. ಅರ್ಯೋಕನು ನಡೆದ ಸಂಗತಿಯನ್ನು ದಾನಿಯೇಲನಿಗೆ ತಿಳಿಸಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ದಾನಿಯೇಲನು ಅರಸನ ಅಧಿಪತಿಯಾದ ಅರ್ಯೋಕನಿಗೆ ಉತ್ತರವಾಗಿ, “ಅರಸನಿಂದ ಇಂಥ ಕಠಿಣವಾದ ಆಜ್ಞೆ ಏಕೆ?” ಎಂದು ಕೇಳಲು, ಅರ್ಯೋಕನು ದಾನಿಯೇಲನಿಗೆ ಆ ಸಂಗತಿಯ ಬಗ್ಗೆ ವಿವರಿಸಿದನು.