Daniel 2:25 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಕೂಡಲೇ ಅರ್ಯೋಕನು ದಾನಿಯೇಲನನ್ನು ಅರಸನ ಹತ್ತಿರ ಕರೆದುಕೊಂಡು ಹೋದನು. ಅರ್ಯೊಕನು ಅರಸನಿಗೆ, “ಯೆಹೂದದಿಂದ ಸೆರೆಯಾಳಾಗಿ ತಂದವರಲ್ಲಿ ಅರಸನ ಕನಸನ್ನು ಮತ್ತು ಅದರ ಅರ್ಥವನ್ನು ಹೇಳಬಲ್ಲ ಒಬ್ಬನನ್ನು ನಾನು ಕಂಡುಹಿಡಿದಿದ್ದೇನೆ. ಅವನು ಅರಸನ ಕನಸನ್ನೂ ಅದರ ಅರ್ಥವನ್ನೂ ತಿಳಿಸುತ್ತಾನೆ” ಎಂದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕೂಡಲೆ ಅರ್ಯೋಕನು ದಾನಿಯೇಲನನ್ನು ರಾಜನ ಬಳಿಗೆ ಶೀಘ್ರವಾಗಿ ಕರೆದುಕೊಂಡು ಹೋಗಿ, “ರಾಜನೇ, ಕನಸಿನ ಅಭಿಪ್ರಾಯವನ್ನು ನಿನಗೆ ತಿಳಿಸಬಲ್ಲವನೊಬ್ಬನು ಯೆಹೂದದಿಂದ ಸೆರೆಯಾಗಿ ತಂದವರಲ್ಲಿ ನನಗೆ ಸಿಕ್ಕಿದ್ದಾನೆ” ಎಂದು ಅರಿಕೆಮಾಡಿದನು.
Kannada BSI Bible 2016
ಆಗ ಅರ್ಯೋಕನು ದಾನಿಯೇಲನನ್ನು ತ್ವರೆ ಯಾಗಿ ಅರಸನ ಮುಂದೆ ಕರೆದುಕೊಂಡು ಹೋಗಿ --ಯೆಹೂದ್ಯರ ಸೆರೆಯವರಲ್ಲಿ ನನಗೆ ಒಬ್ಬ ಮನು ಷ್ಯನು ಸಿಕ್ಕಿದ್ದಾನೆ; ಅವನು ಅರಸನಿಗೆ ಅರ್ಥವನ್ನು ತಿಳಿಸುತ್ತಾನೆ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಕೂಡಲೆ ಅರ್ಯೋಕನು ದಾನಿಯೇಲನನ್ನು ಸನ್ನಿಧಿಗೆ ತ್ವರೆಯಾಗಿ ಕರೆದುಕೊಂಡು ಹೋಗಿ - ರಾಜನೇ, ಕನಸಿನ ಅಭಿಪ್ರಾಯವನ್ನು ನಿನಗೆ ತಿಳಿಸಬಲ್ಲವನೊಬ್ಬನು ಯೆಹೂದದಿಂದ ಸೆರೆಯಾಗಿ ತಂದವರಲ್ಲಿ ನನಗೆ ಸಿಕ್ಕಿದ್ದಾನೆ ಎಂದು ಅರಿಕೆಮಾಡಲು
Kannada Bible (KNCL) BSI 2016
ಕೂಡಲೆ ಅರ್ಯೋಕನು ದಾನಿಯೇಲನನ್ನು ರಾಜನ ಸನ್ನಿಧಿಗೆ ಬೇಗಬೇಗನೆ ಕರೆದುಕೊಂಡು ಬಂದನು. “ರಾಜರೇ, ಆ ಕನಸಿನ ಉದ್ದೇಶವನ್ನು ನಿಮಗೆ ತಿಳಿಸಬಲ್ಲ ಒಬ್ಬನು ನನಗೆ ಸಿಕ್ಕಿದ್ದಾನೆ. ಅವನು ಜುದೇಯದಿಂದ ಸೆರೆಯಾಳಾಗಿ ತಂದವರಲ್ಲಿ ಒಬ್ಬನಾಗಿದ್ದಾನೆ,” ಎಂದು ಅರಿಕೆಮಾಡಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅರ್ಯೋಕನು ದಾನಿಯೇಲನನ್ನು ತ್ವರೆಯಾಗಿ ಅರಸನ ಮುಂದೆ ಕರೆದುಕೊಂಡು ಹೋಗಿ, ಆತನಿಗೆ, “ಯೆಹೂದ್ಯರ ಸೆರೆಯವರಲ್ಲಿ ನನಗೆ ಒಬ್ಬ ಮನುಷ್ಯನು ಸಿಕ್ಕಿದ್ದಾನೆ. ಅವನು ಅರಸನಿಗೆ ಅವನ ಕನಸಿನ ಅರ್ಥವನ್ನು ತಿಳಿಸುತ್ತಾನೆ,” ಎಂದನು.