Daniel 2:27 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ದಾನಿಯೇಲನು, “ಅರಸನಾದ ನೆಬೂಕದ್ನೆಚ್ಚರನೇ, ಯಾವ ವಿದ್ವಾಂಸರಾಗಲಿ ಮಾಟಗಾರರಾಗಲಿ ಜೋಯಿಸರಾಗಲಿ ಶಕುನದವರಾಗಲಿ ಅರಸನಾದ ನಿನಗೆ ರಹಸ್ಯವನ್ನು ಹೇಳಲಾಗಲಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅದಕ್ಕೆ ದಾನಿಯೇಲನು ರಾಜನನ್ನು ಕುರಿತು, “ರಾಜನು ಕೇಳುವ ರಹಸ್ಯವನ್ನು ವಿದ್ವಾಂಸರಾಗಲಿ, ಮಾಟಗಾರರಾಗಲಿ, ಜೋಯಿಸರಾಗಲಿ, ಶಕುನದವರಾಗಲಿ ಯಾರೂ ರಾಜನಿಗೆ ತಿಳಿಸಲಾರರು.
Kannada BSI Bible 2016
ಆಗ ದಾನಿ ಯೇಲನು ಅರಸನ ಸನ್ನಿಧಿಯಲ್ಲಿ ಪ್ರತ್ಯುತ್ತರವಾಗಿ--ಅರಸನು ನಿರ್ಭಂಧವಾಗಿ ಕೇಳುವ ರಹಸ್ಯವನ್ನು ಜ್ಞಾನಿಗಳೂ ಜೋತಿಷ್ಯರೂ ಮಂತ್ರಗಾರರೂ ಶಕುನ ಹೇಳುವವರೂ ಅರಸನಿಗೆ ತಿಳಿಸಲಾರರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅದಕ್ಕೆ ದಾನಿಯೇಲನು ಸನ್ನಿಧಿಯಲ್ಲಿ - ರಾಜನು ಕೇಳುವ ರಹಸ್ಯವನ್ನು ವಿದ್ವಾಂಸರಾಗಲಿ ಮಾಟಗಾರರಾಗಲಿ ಜೋಯಿಸರಾಗಲಿ ಶಕುನದವರಾಗಲಿ ಯಾರೂ ರಾಜನಿಗೆ ತಿಳಿಸಲಾರರು;
Kannada Bible (KNCL) BSI 2016
ಅದಕ್ಕೆ ದಾನಿಯೇಲನು ಸನ್ನಿಧಿಯಲ್ಲಿ, “ರಾಜರು ಕೇಳುವ ರಹಸ್ಯವನ್ನು ವಿದ್ವಾಂಸರಾಗಲಿ, ಮಾಟಗಾರರಾಗಲಿ, ಜೋಯಿಸರಾಗಲಿ, ಶಕುನದವರಾಗಲಿ ಯಾರೂ ತಿಳಿಸಲಾರರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ದಾನಿಯೇಲನು ಅರಸನ ಸನ್ನಿಧಿಯಲ್ಲಿ ಉತ್ತರವಾಗಿ, “ಅರಸನು ಕೇಳುವ ರಹಸ್ಯವನ್ನು ಜ್ಞಾನಿಗಳೂ, ಜ್ಯೋತಿಷ್ಯರೂ, ಮಂತ್ರಗಾರರೂ, ಶಕುನ ಹೇಳುವವರೂ ಅರಸನಿಗೆ ತಿಳಿಸಲಾರರು.