Daniel 2:5 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆಗ ಅರಸನಾದ ನೆಬೂಕದ್ನೆಚ್ಚರನು, “ಹಾಗಲ್ಲ, ನೀವು ನನಗೆ ನನ್ನ ಕನಸನ್ನೂ ಅದರ ಅರ್ಥವನ್ನೂ ತಿಳಿಸಬೇಕು. ಇಲ್ಲವಾದರೆ ನಾನು ನಿಮ್ಮ ದೇಹವನ್ನು ತುಂಡುತುಂಡಾಗಿ ಕತ್ತರಿಸಲು ಆಜ್ಞಾಪಿಸುತ್ತೇನೆ. ನಿಮ್ಮ ಮನೆಗಳನ್ನು ಬೀಳಿಸಿ ಮಣ್ಣುಗುಡ್ಡೆಯನ್ನಾಗಿಯೂ ಮತ್ತು ಬೂದಿರಾಶಿಯನ್ನಾಗಿಯೂ ಮಾಡುವಂತೆ ಆಜ್ಞಾಪಿಸುತ್ತೇನೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ರಾಜನು ಪಂಡಿತರಿಗೆ ಪ್ರತ್ಯುತ್ತರವಾಗಿ, “ನನ್ನ ಮಾತು ಖಂಡಿತ; ನೀವೇ ಆ ಕನಸನ್ನೂ, ಅದರ ಅರ್ಥವನ್ನೂ ನನಗೆ ತಿಳಿಸದಿದ್ದರೆ ನಿಮ್ಮನ್ನು ತುಂಡುತುಂಡಾಗಿ ಕತ್ತರಿಸುವೆನು, ನಿಮ್ಮ ಮನೆಗಳನ್ನು ತಿಪ್ಪೆಯನ್ನಾಗಿ ಮಾಡಿಬಿಡುವೆನು.
Kannada BSI Bible 2016
ಅರಸನು ಕಸ್ದೀ ಯರಿಗೆ ಪ್ರತ್ಯುತ್ತರವಾಗಿ--ಆ ಕನಸಿನ ಸಂಗತಿಯು ನನ್ನನ್ನು ಬಿಟ್ಟು ಹೋಯಿತು; ನೀವು ಕನಸನ್ನು ಅದರ ಅರ್ಥದೊಂದಿಗೆ ನನಗೆ ತಿಳಿಸದಿದ್ದರೆ ನೀವು ತುಂಡು ತುಂಡಾಗಿ ಕತ್ತರಿಸಲ್ಪಡುವಿರಿ; ನಿಮ್ಮ ಮನೆಗಳು ತಿಪ್ಪೆ ಗುಂಡಿಗಳನ್ನಾಗಿ ಮಾಡಿಸುವೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ರಾಜನು ಪಂಡಿತರಿಗೆ ಪ್ರತ್ಯುತ್ತರವಾಗಿ - ನನ್ನ ಮಾತು ಖಂಡಿತ; ನೀವೇ ಆ ಕನಸನ್ನೂ ಅದರ ಅಭಿಪ್ರಾಯವನ್ನೂ ನನಗೆ ತಿಳಿಸದಿದ್ದರೆ ನಿಮ್ಮನ್ನು ಚೂರುಚೂರಾಗಿ ಕಡಿಸುವೆನು, ನಿಮ್ಮ ಮನೆಗಳನ್ನು ತಿಪ್ಪೆಯನ್ನಾಗಿ ಮಾಡಿಸಿಬಿಡುವೆನು;
Kannada Bible (KNCL) BSI 2016
ಆಗ ರಾಜನು ಆ ಪಂಡಿತರಿಗೆ, “ನನ್ನ ಈ ಮಾತು ಖಂಡಿತ; ನೀವು ಈ ಕನಸನ್ನೂ ಅದರ ಉದ್ದೇಶವನ್ನೂ ನನಗೆ ತಿಳಿಸದಿದ್ದರೆ ನಿಮ್ಮನ್ನು ತುಂಡುತುಂಡಾಗಿ ಕತ್ತರಿಸುವೆನು; ನಿಮ್ಮ ಮನೆಗಳನ್ನು ತಿಪ್ಪೆಗುಂಡಿಯನ್ನಾಗಿಸುವೆನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅರಸನು ಪಂಡಿತರಿಗೆ ಉತ್ತರವಾಗಿ, “ನನ್ನ ಈ ಮಾತು ಖಂಡಿತ. ನೀವು ಕನಸನ್ನು ಅದರ ಅರ್ಥದೊಂದಿಗೆ ನನಗೆ ತಿಳಿಸದಿದ್ದರೆ, ನಿಮ್ಮನ್ನು ತುಂಡುತುಂಡಾಗಿ ಕತ್ತರಿಸುವೆನು. ನಿಮ್ಮ ಮನೆಗಳನ್ನು ತಿಪ್ಪೆ ಗುಂಡಿಗಳನ್ನಾಗಿ ಮಾಡಿಸುವೆನು.