Daniel 2:8 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅರಸನಾದ ನೆಬೂಕದ್ನೆಚ್ಚರನು, “ನೀವು ಹೆಚ್ಚಿನ ಕಾಲಾವಕಾಶವನ್ನು ಪಡೆಯುವ ಪ್ರಯತ್ನ ಮಾಡುತ್ತಿದ್ದೀರೆಂಬುದನ್ನು ನಾನು ಬಲ್ಲೆ. ನಾನು ಹೇಳಿದ್ದು ನಿಮಗೆ ಸರಿಯಾಗಿ ತಿಳಿದಿದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅದಕ್ಕೆ ರಾಜನು, “ನೀವು ಆ ಕನಸನ್ನು ನನಗೆ ತಿಳಿಸದಿದ್ದರೆ ಮರಣದಂಡನೆಯ ನಿಯಮವೇ ನಿಮಗೆ ಗತಿಯಾಗುವುದು ಎಂಬ ನನ್ನ ಮಾತು ಖಂಡಿತವೆಂದು ನೀವು ತಿಳಿದುಕೊಂಡು ಕಾಲಹರಣ ಮಾಡುತ್ತಿದ್ದೀರಿ, ಇದು ನನಗೆ ಚೆನ್ನಾಗಿ ಗೊತ್ತು.
Kannada BSI Bible 2016
ಆಗ ಅರಸನು ಪ್ರತ್ಯುತ್ತರವಾಗಿ--ಅದು ಗತಿಸಿದ ವಿಷಯವೆಂದು ನೀವು ತಿಳಿದಿದ್ದರಿಂದಲೇ ಕಾಲಹರಣ ಮಾಡುತ್ತಿರುವಿರೆಂದು ನಾನು ನಿಶ್ಚಯವಾಗಿ ಬಲ್ಲೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅದಕ್ಕೆ ರಾಜನು - ನೀವು ಆ ಕನಸನ್ನು ನನಗೆ ತಿಳಿಸದಿದ್ದರೆ [ಮರಣದಂಡನೆಯ] ನಿಯಮವೇ ನಿಮಗೆ ಗತಿಯಾಗುವದು ಎಂಬ ನನ್ನ ಮಾತು ಖಂಡಿತವೆಂದು ನೀವು ತಿಳಿದುಕೊಂಡು ಕಾಲಹರಣ ಮಾಡಿತ್ತಿದ್ದೀರಿ, ಇದು ನನಗೆ ಚೆನ್ನಾಗಿ ಗೊತ್ತು;
Kannada Bible (KNCL) BSI 2016
ಅದಕ್ಕೆ ರಾಜನು, “ನೀವು ಆ ಕನಸನ್ನು ನನಗೆ ತಿಳಿಸದಿದ್ದರೆ ನಿಮಗೆ ಮರಣದಂಡನೆಯಾಗುವುದು ಖಚಿತವೆಂದು ತಿಳಿದೇ ಕಾಲಹರಣ ಮಾಡುತ್ತಿದ್ದೀರಿ. ಇದು ನನಗೆ ಚೆನ್ನಾಗಿ ಗೊತ್ತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಅರಸನು ಉತ್ತರವಾಗಿ, “ನಾನು ಇದನ್ನು ದೃಢವಾಗಿ ನಿರ್ಧರಿಸಿದ್ದೇನೆಂದು ಹೇಳಿದ್ದರಿಂದ ನೀವು ಸಮಯ ಉಳಿಸಿಕೊಳ್ಳುವುದಕ್ಕಾಗಿ ಪ್ರಯತ್ನಿಸುತ್ತಿದ್ದೀರೆಂದು ನನಗೆ ನಿಶ್ಚಯವಾಗಿದೆ.