Daniel 4:34 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆ ಕಾಲವು ಕಳೆದ ಮೇಲೆ ನೆಬೂಕದ್ನೆಚ್ಚರನಾದ ನಾನು ಆಕಾಶದ ಕಡೆಗೆ ನೋಡಿದೆ. ಆಗ ನಾನು ಸ್ವಸ್ಥ ಬುದ್ಧಿಯುಳ್ಳವನಾಗಿದ್ದೆ. ಬಳಿಕ ನಾನು ಮಹೋನ್ನತನಾದ ದೇವರನ್ನು ಸ್ತುತಿಸಿದೆ. ನಿತ್ಯನಾದ ಆ ದೇವರನ್ನು ಕೊಂಡಾಡಿದೆ. ಸ್ತೋತ್ರಮಾಡಿದೆ. ದೇವರ ಆಳ್ವಿಕೆಯು ಶಾಶ್ವತವಾದದ್ದು! ಆತನ ಸಾಮ್ರಾಜ್ಯವು ಎಲ್ಲಾ ತಲೆಮಾರುಗಳಲ್ಲಿಯೂ ಇರುವುದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೇಮಿಸಿದ ಆ ಕಾಲವು ಕಳೆದ ಮೇಲೆ ನೆಬೂಕದ್ನೆಚ್ಚರನಾದ ನಾನು ಪರಲೋಕದ ಕಡೆಗೆ ಕಣ್ಣೆತ್ತಲು ನನ್ನ ಬುದ್ಧಿಯು ಪುನಃ ನನ್ನ ಸ್ವಾಧೀನವಾಯಿತು. “ಆಗ ನಾನು ಪರಾತ್ಪರನಾದ ದೇವರನ್ನು ಕೊಂಡಾಡಿ, ಸದಾ ಜೀವಸ್ವರೂಪನಾದವನಿಗೆ ಸ್ತುತಿಸ್ತೋತ್ರಗಳನ್ನು ಸಲ್ಲಿಸಿದೆನು; ಆತನ ಆಳ್ವಿಕೆಯು ಶಾಶ್ವತ, ಆತನ ರಾಜ್ಯವು ತಲತಲಾಂತರಕ್ಕೂ ಸ್ಥಿರವಾಗಿರುವುದು.
Kannada BSI Bible 2016
ಆ ಕೊನೆಯ ದಿನಗಳಲ್ಲಿ ನೆಬೂಕದ್ನೆಚ್ಚರನಾದ ನಾನು ನನ್ನ ಕಣ್ಣುಗಳನ್ನು ಪರ ಲೋಕದ ಕಡೆಗೆ ಎತ್ತಿದೆನು; ನನ್ನ ತಿಳುವಳಿಕೆ ನನಗೆ ತಿರುಗಿ ಬಂತು; ಆಗ ನಾನು ಮಹೋನ್ನತನನ್ನು ಸ್ತುತಿಸಿ ನಿರಂತರವಾಗಿ ಜೀವಿಸುವಾತನೂ ನಿತ್ಯವಾದ ಆಳ್ವಿಕೆ ಯನ್ನು ಆಳುವಾತನನ್ನು ತಲತಲಾಂತರಗಳ ವರೆಗೂ ರಾಜ್ಯ ಉಳ್ಳಾತನನ್ನು ಹೊಗಳಿ ಘನಪಡಿಸಿದೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆ ಕಾಲವು ಕಳೆದ ಮೇಲೆ ನೆಬೂಕದ್ನೆಚ್ಚರನಾದ ನಾನು ಆಕಾಶದ ಕಡೆಗೆ ಕಣ್ಣೆತ್ತಲು ನನ್ನ ಬುದ್ಧಿಯು ಪುನಃ ನನ್ನ ಸ್ವಾಧೀನವಾಯಿತು. ಆಗ ನಾನು ಪರಾತ್ಪರನನ್ನು ಕೊಂಡಾಡಿ ಸದಾ ಜೀವಿಸುವಾತನಿಗೆ ಸ್ತುತಿಸ್ತೋತ್ರಗಳನ್ನು ಸಲ್ಲಿಸಿದೆನು; ಆತನ ಆಳಿಕೆಯು ಶಾಶ್ವತ, ಆತನ ರಾಜ್ಯವು ತಲತಲಾಂತರಕ್ಕೂ ನಿಲ್ಲುವದು;
Kannada Bible (KNCL) BSI 2016
ಗುರುತಿಸಲಾಗಿದ್ದ ಕಾಲವು ಕಳೆಯಿತು. ನೆಬೂಕದ್ನೆಚ್ಚರನು, “ನಾನು ಪರಲೋಕದ ಕಡೆಗೆ ಕಣ್ಣೆತ್ತಿ ನೋಡಿದೆ. ನನ್ನ ಬುದ್ಧಿ ಮತ್ತೆ ನನಗೆ ಸ್ವಾಧೀನವಾಯಿತು. ಆಗ ನಾನು ಪರಾತ್ಪರ ದೇವರನ್ನು ಕೊಂಡಾಡಿದೆ. ಜೀವಸ್ವರೂಪರಾದ ಅವರಿಗೆ ಸ್ತುತಿಸ್ತೋತ್ರಗಳನ್ನು ಸಲ್ಲಿಸಿದೆ: ಆತನ ಆಳ್ವಿಕೆ ಶಾಶ್ವತ ಆತನ ರಾಜ್ಯ ತಲತಲಾಂತರಕ್ಕೂ ಸ್ಥಿರ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆ ಸಮಯದ ಅಂತ್ಯದಲ್ಲಿ ನೆಬೂಕದ್ನೆಚ್ಚರನಾದ ನಾನು ನನ್ನ ಕಣ್ಣುಗಳನ್ನು ಪರಲೋಕದ ಕಡೆಗೆ ಎತ್ತಿದೆನು. ನನ್ನ ತಿಳುವಳಿಕೆ ನನಗೆ ತಿರುಗಿ ಬಂತು. ಆಗ ನಾನು ಮಹೋನ್ನತರನ್ನು ಕೊಂಡಾಡಿದೆನು. ಸದಾಕಾಲಕ್ಕೂ ಇರುವವರಾದ ಅವರನ್ನು ಗೌರವಿಸಿ, ಮಹಿಮೆ ಪಡಿಸಿದೆನು. ಅವರ ಆಡಳಿತವು ನಿತ್ಯವಾದ ಆಡಳಿತವಾಗಿದೆ. ಅವರ ರಾಜ್ಯವು ತಲತಲಾಂತರಕ್ಕೂ ಇರುವುದು.