Daniel 5:19 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಹಲವಾರು ಜನಾಂಗದ ಮತ್ತು ಭಾಷೆಯ ಜನರು ಅವನಿಗೆ ತುಂಬ ಹೆದರುತ್ತಿದ್ದರು. ಏಕೆಂದರೆ ಮಹೋನ್ನತನಾದ ದೇವರು ಅವನನ್ನು ಬಹುದೊಡ್ಡ ರಾಜನನ್ನಾಗಿ ಮಾಡಿದ್ದನು. ನೆಬೂಕದ್ನೆಚ್ಚರನು ಯಾರನ್ನಾದರೂ ಕೊಲ್ಲಬೇಕೆಂದು ಇಚ್ಛಿಸಿದರೆ ಅವನನ್ನು ಕೊಲ್ಲಿಸಿಬಿಡುತ್ತಿದ್ದನು; ತನಗೆ ಬೇಕಾದವರನ್ನು ಉಳಿಸುತ್ತಿದ್ದನು; ತನ್ನ ಮನಸ್ಸಿಗೆ ಬಂದವರನ್ನು ಏರಿಸುತ್ತಿದ್ದನು; ತನ್ನ ಮನಸ್ಸಿಗೆ ಬಂದವರನ್ನು ಇಳಿಸುತ್ತಿದ್ದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಈ ಮಹತ್ವದ ನಿಮಿತ್ತ ಸಕಲ ಜನಾಂಗ, ಕುಲ, ಭಾಷೆಗಳವರು ಅವನ ಮುಂದೆ ಬೆಚ್ಚಿಬೆದರಿದರು; ತನಗೆ ಬೇಕಾದವರನ್ನು ಕೊಲ್ಲಿಸಿದನು, ತನಗೆ ಬೇಕಾದವರನ್ನು ಉಳಿಸಿದನು, ಮನಸ್ಸು ಬಂದವರನ್ನು ಅಭಿವೃದ್ಧಿಮಾಡಿದನು, ಮನಸ್ಸು ಬಂದವರನ್ನು ಇಳಿಸಿದನು.
Kannada BSI Bible 2016
ಆತನು ಅವನಿಗೆ ಕೊಟ್ಟ ಮಹ ತ್ತಿನ ನಿಮಿತ್ತ ಸಕಲ ಪ್ರಜೆಗಳೂ ಜನಾಂಗಗಳೂ ಭಾಷೆಯವರೂ ಅವನ ಮುಂದೆ ಹೆದರಿ ನಡುಗಿ ದರು; ತನಗೆ ಬೇಕಾದವರನ್ನು ಬದುಕಿಸಿ ಬೇಡವಾದ ವರನ್ನು ಕೊಂದನು, ಇಷ್ಟವಿದ್ದವರನ್ನು ಎತ್ತಿ ಇಷ್ಟವಿಲ್ಲ ದವರನ್ನು ಬಿಟ್ಟನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಈ ಮಹತ್ವ ವರದ ನಿವಿುತ್ತ ಸಕಲ ಜನಾಂಗಕುಲಭಾಷೆಗಳವರು ಅವನ ಮುಂದೆ ಬೆಚ್ಚಿಬೆದರಿದರು; ಬೇಕುಬೇಕಾದವರನ್ನು ಕೊಲ್ಲಿಸಿದನು, ಬೇಕುಬೇಕಾದವರನ್ನು ಉಳಿಸಿದನು, ಮನಸ್ಸುಬಂದವರನ್ನು ಏರಿಸಿದನು, ಮನಸ್ಸುಬಂದವರನ್ನು ಇಳಿಸಿದನು.
Kannada Bible (KNCL) BSI 2016
ಇಂಥ ಮಹತ್ವ ವರದ ನಿಮಿತ್ತ ಸಕಲ ದೇಶ-ಕುಲ-ಭಾಷೆಗಳವರು ಅವರ ಮುಂದೆ ಭಯದಿಂದ ನಡುಗುತ್ತಿದ್ದರು. ತಮಗೆ ಇಷ್ಟಬಂದ ಹಾಗೆ ಒಬ್ಬನನ್ನು ಬದುಕಿಸಿದರು, ಇನ್ನೊಬ್ಬನನ್ನು ಕೊಲ್ಲಿಸಿದರು. ಮನಸ್ಸಿಗೆ ಬಂದಹಾಗೆ ಒಬ್ಬನನ್ನು ಮೇಲೇರಿಸಿದರು, ಇನ್ನೊಬ್ಬನನ್ನು ಕೆಳಕ್ಕಿಳಿಸಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರು ಅವನಿಗೆ ಕೊಟ್ಟ ಮಹತ್ತಿನ ನಿಮಿತ್ತ ಸಕಲ ಪ್ರಜೆಗಳೂ, ಜನಾಂಗಗಳೂ, ಭಾಷೆಯವರೂ ಅವನ ಮುಂದೆ ಹೆದರಿ ನಡುಗಿದರು. ತನಗೆ ಬೇಕಾದವರನ್ನು ಬದುಕಿಸಿ ಬೇಡವಾದವರನ್ನು ಕೊಂದನು. ಇಷ್ಟವಿದ್ದವರನ್ನು ಸುಸ್ಥಿತಿಗೆ ಏರಿಸಿ, ಇಷ್ಟವಿಲ್ಲದವರನ್ನು ಕೆಳಕ್ಕಿಳಿಸಿದನು.