Daniel 5:3 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆದ್ದರಿಂದ ಅವರು ಜೆರುಸಲೇಮಿನ ಆಲಯದಿಂದ ತಂದಿದ್ದ ಆ ಪಾತ್ರೆಗಳನ್ನು ತಂದರು. ರಾಜನು, ಅವನ ಅಧಿಕಾರಿಗಳು, ಅವನ ಪತ್ನಿಯರು, ಅವನ ಉಪಪತ್ನಿಯರು ಅವುಗಳಲ್ಲಿ ದ್ರಾಕ್ಷಾರಸವನ್ನು ಕುಡಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆರೂಸಲೇಮಿನ ದೇವಾಲಯದಿಂದ ಸೂರೆಯಾದ ಬಂಗಾರದ ಪಾತ್ರೆಗಳನ್ನು ತಂದೊಡನೆ ರಾಜನೂ, ಅವನ ಮುಖಂಡರೂ, ಪತ್ನಿಯರು ಮತ್ತು ಉಪಪತ್ನಿಯರೂ ಅವುಗಳಲ್ಲಿ ಕುಡಿದರು.
Kannada BSI Bible 2016
ಆಗ ಅವರು ಯೆರೂಸಲೇಮಿನ ದೇವಾಲಯದೊಳಗಿಂದ ತೆಗೆದ ಬಂಗಾರದ ಪಾತ್ರೆ ಗಳನ್ನು ತಂದರು. ಅರಸನೂ ಅವನ ಪ್ರಭುಗಳೂ ಪತ್ನಿ ಮತ್ತು ಉಪಪತ್ನಿಯರೂ ಅವುಗಳಲ್ಲಿ ಕುಡಿದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆರೂಸಲೇವಿುನ ದೇವಾಲಯದ ನಡುಗುಡಿಯಿಂದ ಸೂರೆಯಾದ ಬಂಗಾರದ ಪಾತ್ರೆಗಳನ್ನು ತರಲು ರಾಜನೂ ಅವನ ಮುಖಂಡರೂ ಪತ್ನ್ಯುಪಪತ್ನಿಯರೂ ಅವುಗಳಲ್ಲಿ ಕುಡಿದರು.
Kannada Bible (KNCL) BSI 2016
ಬಂಗಾರದ ಪೂಜಾ ಪಾತ್ರೆಗಳನ್ನು ತರಿಸಿದ. ರಾಜನೂ ಅವನ ಪ್ರಮುಖರೂ ಪತ್ನಿ - ಉಪಪತ್ನಿಯರೂ ಅವುಗಳಲ್ಲಿ ಕುಡಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಅವರು ಯೆರೂಸಲೇಮಿನ ದೇವರ ಆಲಯದೊಳಗಿಂದ ತಂದಿದ್ದ ಬಂಗಾರದ ಪಾತ್ರೆಗಳನ್ನು ತಂದರು. ಅರಸನೂ ಅವರ ಪ್ರಧಾನರೂ ಪತ್ನಿ ಮತ್ತು ಉಪಪತ್ನಿಯರೂ ಅವುಗಳಲ್ಲಿ ಕುಡಿದರು.