Daniel 6:15 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆಗ ಅವರು ಗುಂಪಾಗಿ ಅರಸನ ಬಳಿಗೆ ಹೋಗಿ, “ಅರಸನೇ, ನೆನಪಿಡು, ಮೇದ್ಯಯರ ಮತ್ತು ಪಾರಸಿಯರ ಶಾಸನದ ಪ್ರಕಾರ ಅರಸನ ಹಸ್ತಾಕ್ಷರದೊಂದಿಗೆ ಹೊರಡಿಸಿದ ರಾಜಾಜ್ಞೆಯನ್ನು ಎಂದಿಗೂ ರದ್ದುಗೊಳಿಸಲಾಗುವುದಿಲ್ಲ; ಅದರಲ್ಲಿ ಬದಲಾವಣೆ ಮಾಡಲಾಗುವುದಿಲ್ಲ” ಎಂದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇದನ್ನು ತಿಳಿದು ಆ ಜನರು ರಾಜನ ಬಳಿಗೆ ಕೂಡಿಬಂದು, “ಪ್ರಭುವೇ, ರಾಜನು ವಿಧಿಸಿದ ಯಾವ ನಿಬಂಧನೆಯಾಗಲಿ, ನಿಯಮವಾಗಲಿ ರದ್ದಾಗಬಾರದು ಎಂಬ ಧರ್ಮಸೂತ್ರವು ಮೇದ್ಯಯರಲ್ಲಿಯೂ, ಪಾರಸಿಯರಲ್ಲಿಯೂ ಉಂಟೆಂಬುದು ನಿನಗೆ ಗೊತ್ತಿರಲಿ” ಎಂದು ಹೇಳಿದರು. ಇದರಿಂದ ಅನಿವಾರ್ಯವಾಗಿ ರಾಜನು ಅಪ್ಪಣೆ ಕೊಡಲೇ ಬೇಕಾಯಿತು.
Kannada BSI Bible 2016
ಆಗ ಆ ಮನುಷ್ಯರು ಅರಸನ ಬಳಿಗೆ ಕೂಡಿ ಬಂದು ಅರಸ ನಿಗೆ--ಓ ಅರಸನೇ, ನೀನು ಜಾರಿಗೆ ತಂದಿರುವ ಯಾವ ನಿರ್ಣಯವಾದರೂ ಆಜ್ಞೆಯಾದರೂ ಬದಲಾಯಿಸ ಬಾರದೆಂದು ಮೇದ್ಯಯರ ಮತ್ತು ಪಾರಸೀಯರ ನ್ಯಾಯ ಪ್ರಮಾಣದಲ್ಲಿದೆ ಎಂದು ನಿನಗೆ ತಿಳಿದರಲಿ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇದನ್ನು ತಿಳಿದು ಆ ಜನರು ಸನ್ನಿಧಿಗೆ ಕೂಡಿಬಂದು - ಪ್ರಭುವೇ, ರಾಜನು ವಿಧಿಸಿದ ಯಾವ ನಿಬಂಧನೆಯಾಗಲಿ ನಿಯಮವಾಗಲಿ ರದ್ದಾಗಬಾರದು ಎಂಬ ಧರ್ಮಸೂತ್ರವು ಮೇದ್ಯಯರಲ್ಲಿಯೂ ಪಾರಸಿಯರಲ್ಲಿಯೂ ಉಂಟೆಂಬದು ನಿನಗೆ ಗೊತ್ತಿರಲಿ ಎಂದು ಹೇಳಲು ರಾಜನ ಅಪ್ಪಣೆಯಾಯಿತು;
Kannada Bible (KNCL) BSI 2016
ಇದನ್ನು ಅರಿತುಕೊಂಡ ಆ ಅಧಿಕಾರಿಗಳು ರಾಜಸನ್ನಿಧಿಗೆ ಮತ್ತೆ ಕೂಡಿಬಂದು, “ಪ್ರಭೂ, ರಾಜರು ವಿಧಿಸಿದ ಯಾವ ನಿಬಂಧನೆಯಾಗಲಿ, ಶಾಸನವಾಗಲಿ ರದ್ದಾಗಬಾರದು ಎಂಬ ಧರ್ಮಸೂತ್ರ ಮೇದ್ಯರಲ್ಲೂ ಪರ್ಷಿಯರಲ್ಲೂ ಉಂಟೆಂಬುದು ತಮಗೆ ತಿಳಿದಿರಬೇಕು,” ಎಂದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಆ ಮನುಷ್ಯರು ಅರಸನ ಬಳಿಗೆ ಕೂಡಿಬಂದು ಅರಸನಿಗೆ, “ಅರಸನೇ, ನೀನು ಜಾರಿಗೆ ತಂದಿರುವ ಯಾವ ನಿರ್ಣಯವಾದರೂ, ಆಜ್ಞೆಯಾದರೂ ರದ್ದಾಗಬಾರದು ಎಂಬ ಮೇದ್ಯ ಮತ್ತು ಪಾರಸಿಯರ ನಿಯಮದಲ್ಲಿದೆ ಎಂದು ನಿನಗೆ ತಿಳಿದಿರಬೇಕು,” ಎಂದರು.