Daniel 6:2 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆ ನೂರಿಪ್ಪತ್ತು ಜನರ ಮೇಲೆ ಮೂರು ಜನ ಮುಖ್ಯಾಧಿಕಾರಿಗಳನ್ನು ನೇಮಿಸಿದನು. ದಾನಿಯೇಲನು ಈ ಮೂರು ಜನ ಮುಖ್ಯಾಧಿಕಾರಿಗಳಲ್ಲೊಬ್ಬನಾಗಿದ್ದನು. ಯಾರೊಬ್ಬರೂ ತನಗೆ ಮೋಸ ಮಾಡದಂತೆ ಮತ್ತು ತನ್ನ ರಾಜ್ಯಕ್ಕೆ ನಷ್ಟವಾಗದಂತೆ ನೋಡಿಕೊಳ್ಳಲು ರಾಜನು ಈ ಮೂವರನ್ನು ನೇಮಿಸಿದ್ದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ರಾಜರಿಗೆ ನಷ್ಟವಾಗದಂತೆ ಆ ದೇಶಾಧಿಪತಿಗಳ ಮೇಲೆ ಅವರಿಂದ ಲೆಕ್ಕ ತೆಗೆದುಕೊಳ್ಳುವ ಮೂವರು ಮುಖ್ಯಾಧಿಕಾರಿಗಳನ್ನೂ ನೇಮಿಸಬೇಕೆಂದು ನಿಶ್ಚಯಿಸಿಕೊಂಡನು; ಆ ಮುಖ್ಯಾಧಿಕಾರಿಗಳಲ್ಲಿ ದಾನಿಯೇಲನು ಒಬ್ಬನು.
Kannada BSI Bible 2016
ಇವರ ಮೇಲೆ ಮೂವರು ದೇಶಾಧಿಪತಿಗಳನ್ನು ನೇಮಿಸುವದು ದಾರ್ಯಾವೆಷನಿಗೆ ಹಿತವೆಂದು ತೋಚಿತು. ಇದರಿಂದ ರಾಜನಿಗೆ ಯಾವ ತೊಂದರೆಯೂ ಇಲ್ಲದೆ ಲೆಕ್ಕಗಳು ಸರಿಯಾಗಿ ಒಪ್ಪಿಸಲ್ಪಡುತ್ತಿದ್ದವು. ಇವರಲ್ಲಿ ದಾನಿಯೇ ಲನು ಮೊದಲನೆಯವನಾಗಿದ್ದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ರಾಜನಿಗೆ ನಷ್ಟವಾಗದಂತೆ ಆ ದೇಶಾಧಿಪತಿಗಳ ಮೇಲೆ ಅವರಿಂದ ಲೆಕ್ಕ ತೆಗೆದುಕೊಳ್ಳುವ ಮೂವರು ಮುಖ್ಯಾಧಿಕಾರಿಗಳನ್ನೂ ನೇವಿುಸಬೇಕೆಂದು ನಿಶ್ಚಯಿಸಿಕೊಂಡನು; ಆ ಮುಖ್ಯಾಧಿಕಾರಿಗಳಲ್ಲಿ ದಾನಿಯೇಲನು ಒಬ್ಬನು.
Kannada Bible (KNCL) BSI 2016
ಇವರ ಮೇಲ್ವಿಚಾರಣೆಗಾಗಿಯೂ ತನ್ನ ಹಿತಾಸಕ್ತಿಯ ದೃಷ್ಟಿಯಿಂದಲೂ ಮೂವರು ಮುಖ್ಯಾಧಿಕಾರಿಗಳನ್ನು ನೇಮಿಸಲು ನಿಶ್ಚಯಿಸಿದನು. ಈ ಮೂವರು ಮುಖ್ಯಸ್ಥರಲ್ಲಿ ದಾನಿಯೇಲನು ಒಬ್ಬನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇವರ ಮೇಲೆ ಮೂವರು ದೇಶಾಧಿಪತಿಗಳನ್ನು ನೇಮಿಸುವುದು ದಾರ್ಯಾವೆಷನಿಗೆ ಹಿತವೆಂದು ತೋಚಿತು. ಇದರಿಂದ ರಾಜನಿಗೆ ಯಾವ ನಷ್ಟವಾಗದಂತೆ ಲೆಕ್ಕ ಒಪ್ಪಿಸಲಾಯಿತು. ಇವರಲ್ಲಿ ದಾನಿಯೇಲನು ಒಬ್ಬನಾಗಿದ್ದನು.