Daniel 6:27 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ದೇವರು ಜನರಿಗೆ ಸಹಾಯ ಮಾಡುತ್ತಾನೆ ಮತ್ತು ರಕ್ಷಿಸುತ್ತಾನೆ. ದೇವರು ಭೂಮ್ಯಾಕಾಶಗಳಲ್ಲಿ ಅದ್ಭುತಕಾರ್ಯಗಳನ್ನು ಮಾಡುತ್ತಾನೆ. ದೇವರು ದಾನಿಯೇಲನನ್ನು ಸಿಂಹಗಳಿಂದ ರಕ್ಷಿಸಿದನು.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆತನು ಉದ್ಧರಿಸುವವನೂ, ರಕ್ಷಿಸುವವನೂ, ಭೂಮ್ಯಾಕಾಶಗಳಲ್ಲಿ ಅದ್ಭುತಮಹತ್ವಗಳನ್ನು ನಡೆಸುವವನೂ ಆಗಿದ್ದಾನೆ; ಆತನೇ ದಾನಿಯೇಲನನ್ನು ಸಿಂಹಗಳ ಬಾಯಿಂದ ತಪ್ಪಿಸಿದನು.”
Kannada BSI Bible 2016
ಆತನೇ ಉದ್ಧರಿಸುವವನೂ ರಕ್ಷಿಸುವವನೂ ಆಗಿದ್ದು ಪರ ಲೋಕದಲ್ಲಿಯೂ ಭೂಲೋಕದಲ್ಲಿಯೂ ಅದ್ಭುತ ಮಹತ್ವಗಳನ್ನು ನಡೆಸುತ್ತಾನೆ; ದಾನಿಯೇಲನನ್ನು ಸಿಂಹ ಗಳ ಸಾಮರ್ಥ್ಯದಿಂದ ಬಿಡಿಸಿದಾತನು ಆತನೇ.ಹೀಗೆ ಈ ದಾನಿಯೇಲನು ದಾರ್ಯಾವೆಷನ ಆಳಿಕೆಯಲ್ಲಿಯೂ ಪಾರಸೀಯನಾದ ಕೋರೇಷನ ಆಳಿಕೆಯಲ್ಲಿಯೂ ಅಭಿವೃದ್ಧಿಯಾಗಿ ಬಾಳಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆತನು ಉದ್ಧರಿಸುವವನೂ ರಕ್ಷಿಸುವವನೂ ಭೂಮ್ಯಾಕಾಶಗಳಲ್ಲಿ ಅದ್ಭುತಮಹತ್ವಗಳನ್ನು ನಡಿಸುವವನೂ ಆಗಿದ್ದಾನೆ; ಆತನೇ ದಾನಿಯೇಲನನ್ನು ಸಿಂಹಗಳ ಕೈಯಿಂದ ತಪ್ಪಿಸಿದನು.
Kannada Bible (KNCL) BSI 2016
ಆತ ಉದ್ಧರಿಸುವಂಥವನು, ರಕ್ಷಿಸುವಂಥವನು ಭೂಮ್ಯಾಕಾಶಗಳಲ್ಲಿ ಅದ್ಭುತ ಮಹತ್ವಗಳನ್ನು ನಡೆಸುವಂಥವನು! ಆತನೇ ದಾನಿಯೇಲನನ್ನು ಸಿಂಹಗಳ ಬಾಯಿಂದ ತಪ್ಪಿಸಿದವನು!
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರೇ ಉದ್ಧರಿಸುವವರೂ ರಕ್ಷಿಸುವವರೂ ಆಗಿದ್ದು, ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಅದ್ಭುತ ಮಹತ್ತುಗಳನ್ನು ನಡೆಸುತ್ತಾರೆ. ದಾನಿಯೇಲನನ್ನು ಸಿಂಹಗಳ ಸಾಮರ್ಥ್ಯದಿಂದ ಬಿಡಿಸಿದವರೂ ಅವರೇ!”